ಹೈಟೆನ್-ಷನ್ ಕಂಬ ಏರಿದ ಎಂ.ಟಿ.ಬಿ ಪರ ಕಾರ್ಯಕರ್ತರು

Kannada News (itskannada) Hoskote : ಹೈಟೆನ್-ಷನ್ ಕಂಬ ಏರಿದ ಎಂ.ಟಿ.ಬಿ ಪರ ಕಾರ್ಯಕರ್ತರು : ಹೊಸಕೋಟೆಯ ಕಂಬಳಿಪುರ ಬಳಿ ಈ ಘಟನೆ ನಡೆದಿದ್ದು , ತಮ್ಮ ನೆಚ್ಚಿನ ನಾಯಕ ಸತತ ಮೂರು ವಿಜಯ ಸಾಧಿಸಿದ್ದರೂ ಸಚಿವಸ್ಥಾನ ನೀಡದೇ ಇರುವುದನ್ನು ಕಂಡಿಸಿ , ಪ್ರತಿಭಟನೆಗೆ ಇಳಿದ ಪ್ರತಿಭಟನಾ ಕಾರರಲ್ಲಿನ  ಇಬ್ಬರು ಹೈಟೆನ್-ಷನ್ ಕಂಬ ಏರಿ ಕುಳಿತು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹೈಟೆನ್-ಷನ್ ಕಂಬ ಏರಿದ ಎಂ.ಟಿ.ಬಿ ಪರ ಕಾರ್ಯಕರ್ತರು

ಸುಮಾರು 50 ಅಡಿ ಎತ್ತರ ಏರಿ ಪ್ರತಿಭಟಿಸಿದ ರಾಮು ಮತ್ತು ಗಂಗಾದರ್ ಎಂಬುವವರನ್ನು ಪೊಲೀಸರು ಮನವೊಲಿಸಿ ಕೆಳಗಿಳಿಸಲು ಹರ ಸಾಹಸ ಪಡಬೇಕಾಯಿತು, ಈ ನಡುವೆ ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್ ರವರಿಗೆ ಸಚಿವ ಸ್ಥಾನ ವಂಚಿತವಾಗಿದೆ , ಪಕ್ಷದ ನಿಸ್ವಾರ್ಥ ಅಭ್ಯರ್ಥಿಯಾದ ಅವರಿಗೆ ಸಚಿವ ಸ್ಥಾನ ಸಿಗದಿರುವುದು ನೋವುಂಟು ಮಾಡಿದೆ ಎಂದು ಅವರ ಬೆಂಬಲಿಗರು ಹೇಳಿದರು.

ಅಲ್ಲಲ್ಲಿ ಪ್ರತಿಭಟಿಸುತ್ತಿರುವ ಎಂ.ಟಿ.ಬಿ ನಾಗರಾಜ್ ರವರ ಅಭಿಮಾನಿಗಳು , ನಮ್ಮ ಶಾಸಕರಿಗೆ ಸಚಿವ ಸ್ಥಾನ ಸಿಗಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ , ಕೊನೆ ಹಂತದಲ್ಲಿ ಯಾವ ರೂಪ ಪಡೆದು ಕೊಳ್ಳುತ್ತದೆ ಕಾದು ನೋಡಬೇಕಾಗಿದೆ . . . /// Hoskote News Kannada

Webtitle : ಹೈಟೆನ್-ಷನ್ ಕಂಬ ಏರಿದ ಎಂ.ಟಿ.ಬಿ ಪರ ಕಾರ್ಯಕರ್ತರು-ಹೊಸಕೋಟೆ