ಕಾಂಗ್ರೆಸ್ ನಲ್ಲಿ ಭಿನ್ನಮತ : ತನಗೆ ಅನ್ಯಾಯವಾಗಿದೆ ಎಂದ ಎಂಟಿಬಿ ನಾಗರಾಜ್

0 368
Kannada News (itskannada) Hoskoteಕಾಂಗ್ರೆಸ್ ನಲ್ಲಿ ಭಿನ್ನಮತ : ತನಗೆ ಅನ್ಯಾಯವಾಗಿದೆ ಎಂದ ಎಂಟಿಬಿ ನಾಗರಾಜ್ : ಕ್ಷೇತ್ರದ ವಿಶ್ವಾಸ ಹಾಗೂ ಸ್ವಂತ ವರ್ಚಸ್ಸಿನಿಂದ ಸತತ ಮೂರೂ ಬಾರಿಯೂ ಗೆದ್ದಿದ್ದು , ಸಚಿವ ಸ್ಥಾನದಲ್ಲಿ ತನಗೆ ಅನ್ಯಾಯವಾಗಿದೆ ಎಂದಿದ್ದಾರೆ ಹೊಸಕೋಟೆ ಶಾಸಕ ಎಮ್.ಟಿ.ಬಿ ನಾಗರಾಜ್ ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನರ ಸೇವೆ ಹಾಗೂ ಅವರ ಶಕ್ತಿ ನನ್ನ ಗೆಲುವಿಗೆ ಕಾರಣವೇ ಹೊರತು ಕಾಂಗ್ರೆಸ್‌ ಪಕ್ಷದ ಹೆಸರಿನಿಂದಲ್ಲ ಎಂದು ನಾಗರಾಜ್ ಹೇಳಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ್ದೇನೆ, ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿ , ಬಿ.ಜೆ.ಪಿ ಮುಷ್ಟಿಯಲ್ಲಿದ್ದ ಕ್ಷೇತ್ರವನ್ನು ಪ್ರಬಲ ಅಭ್ಯರ್ಥಿ ಬಚ್ಚೇಗೌಡರನ್ನು ಎದುರಿಸಿ ಗೆಲುವು ಸಾಧಿಸಿದ್ದೇನೆ. ಎರಡು ಬಾರಿ ಗೆದ್ದವರಿಗೆ ಎರಡೆರಡು ಬಾರಿ ಸಚಿವರನ್ನಾಗಿ ಮಾಡಿದ್ದಾರೆ ನನ್ನನ್ನು ಪರಿಗಣಿಸಿಲ್ಲ ಎಂದಿದ್ದಾರೆ.
ಹಾಗೂ ನನ್ನ ಬೆಂಬಲಿಗರಾದ ಪಂಚಾಯತ್‌ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು, ಹಾಗೂ ತಾಲೂಕ ಪಂಚಾಯತ್ ಸದಸ್ಯರು ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸಕೋಟೆ ಕ್ಷೇತ್ರದ ಅವರ ಪರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬಾರಿ ನಿರಾಸೆಯಿಂದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.///
( ಹೊಸಕೋಟೆ ಯ ಸುದ್ದಿಗಳಿಗಾಗಿ  itskannada ಗೆ ಬೇಟಿ ನೀಡುವುದನ್ನು ಮರೆಯಬೇಡಿ. ಹಾಗೂ ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ಫೇಸ್ ಬುಕ್ ಪೇಜ್  itskananda ಲೈಕ್ ಮಾಡಿ)

ಹೊಸಕೋಟೆಯಿಂದ ವರದಿಗಾರರು ಬೇಕಾಗಿದ್ದಾರೆ, (itskannada@gmail.com ಸಂಪರ್ಕಿಸಿ)

//// ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Hoskote News Kannada –   Karnataka News – Karnataka Politics News

WebTitle : ಕಾಂಗ್ರೆಸ್ ನಲ್ಲಿ ಭಿನ್ನಮತ : ತನಗೆ ಅನ್ಯಾಯವಾಗಿದೆ ಎಂದ ಎಂಟಿಬಿ ನಾಗರಾಜ್

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada