ಸತೀಶ್ ಜಾರಕಿಹೊಳಿ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

Kannada News (itskannada) Haveri  :ಹಾವೇರಿ-ಸತೀಶ್ ಜಾರಕಿಹೊಳಿ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಹಾವೇರಿ: ಸತೀಶ್ ಜಾರಕಿಹೊಳಿಯವರಿಗೆ  ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು
ಆಗ್ರಹಿಸಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಘಟಕ ಮತ್ತು ವಾಲ್ಮೀಕಿ ಸಮಾಜದ ನಾಯಕರು, ಬೆಂಬಲಿಗರು ಭಾನುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಧರಣಿ ನಡೆಸಿದರು.
ಮಹರ್ಷಿ ವಾಲ್ಮೀಕಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾದ ರಮೇಶ ಆನವಟ್ಟಿ ಮಾತನಾಡಿ, ‘ ನಮ್ಮ ರಾಜ್ಯದಲ್ಲಿ ಸರಿಸುಮಾರಾಗಿ ವಾಲ್ಮೀಕಿ ಜನತೆಯ ಸಂಖ್ಯೆಯು 70 ಲಕ್ಷಕ್ಕೂ ಹೆಚ್ಚಿದೆ. ಅಲ್ಲದೆ ರಾಜ್ಯ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯಕ್ಕೆ  ಕೇವಲ ಒಂದೆ ಒಂದು  ಸ್ಥಾನ ನೀಡಿದ್ದು, ಇನ್ನೂ ಎರಡು ಸಚಿವ ಸ್ಥಾನಗಳನ್ನು ನೀಡಬೇಕಿದೆ ಎಂದು ’  ಆಗ್ರಹಿಸಿದರು .
ಈ ಸಂದರ್ಭದಲ್ಲಿ ಮುಖಂಡರಾದ    ನಾಗರಾಜ ಬಡಮನಿ, ಮಲ್ಲಿಕಾರ್ಜುನ ಬೂದಗಟ್ಟಿ, ಮಾಲತೇಶ ಹೊಳೆಮ್ಮನವರ,  ಮಾಲತೇಶ ಓಲೇಕಾರ, ಮ್ಮನವರ, ನಾಗಪ್ಪ ತಿಪ್ಪಕ್ಕನವರ, ಅಶೋಕ ಹರನಗಿರಿ, ಶೇಖರ ಕಳ್ಳಿಮನಿ, ಲವೇಶ ಕನವಳ್ಳಿ, ರವಿ ಮುದ್ದನಹಳ್ಳಿ, , ಇಮಾಮ ಹಿರೇಮೂಗದೂರ, ಸುನೀಲ್ ಹುರಳಿಕುಪ್ಪಿ,ಮಹಾಂತೇಶ ಹೊಳಿಯಮ್ಮನವರ, ನಾಗರಾಜ ಬಡಮ್ಮನವರ, ರವಿ ಮುದ್ದನಹಳ್ಳಿ ಹಾಗೂ ಮತ್ತಿತರರು ಇದ್ದರು. ////