ಭಾರೀ ಮಳೆಗೆ ಭೂ ಕುಸಿತ : ಮಂಗಳೂರು ರೈಲು ಸಂಚಾರ ಸ್ಥಗಿತ

Kannada News (itskannadaಹಾಸನ : ಭಾರೀ ಮಳೆಗೆ ಭೂ ಕುಸಿತ : ಮಂಗಳೂರು ರೈಲು ಸಂಚಾರ ಸ್ಥಗಿತ
 ಭಾರೀ ಮಳೆಯಿಂದಾಗಿ ಹಾಸನ ಮಂಗಳೂರು ನಡುವೆ ಮೂರು ಕಡೆ ಭೂ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ರೈಲು  ಹಾಸನದಲ್ಲೇ ನಿಲ್ಲಿಸಲಾಗಿದ್ದು, ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಭಾರೀ ಮಳೆಯಿಂದಾಗಿ ಎಡಕುಮೇರಿ ಮೈಲು 218 ಸೇರಿದಂತೆ ಮೂರು ಸ್ಥಳಗಳಲ್ಲಿ ಭೂ ಕುಸಿತ ಸಂಭವಿಸಿದೆ. ಇದನ್ನು ತೆರವುಗೊಳಿಸಿದ ಬಳಿಕ ಮತ್ತೆ ರೈಲು ಸಂಚಾರ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ರೈಲು ಸಂಚಾರ ಸ್ಥಗಿತದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಹಾಸನದಿಂದ ಮತ್ತೆ ಬಸ್ ಮೂಲಕ ಮಂಗಳೂರಿಗೆ ಆಗಮಿಸಬೇಕಾಗಿದೆ.

ಇನ್ನು ಈ ರೈಲು ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರಿಗೆ ಯಶವಂತಪುರ ಜಂಕ್ಷನ್ ನಿಂದ ಬೆಳಿಗ್ಗೆ 7: 30 ಕ್ಕೆ ಹೊರಟಿತ್ತು. ////