ಹಾಸನ : ಗೋಡೆ ಕುಸಿದು ಮಣ್ಣಲ್ಲಿ ಸಿಲುಕಿದ ವೃದ್ಧ | ಕನ್ನಡ ನ್ಯೂಸ್

Kannada News (itskannada) Hassan : ಹಾಸನ : ಗೋಡೆ ಕುಸಿದು ಮಣ್ಣಲ್ಲಿ ಸಿಲುಕಿದ ವೃದ್ಧ : ಮಳೆಗೆ ಮನೆಯೊಂದರ ಗೋಡೆ ಕುಸಿದು ವಯೋವೃದ್ದನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ದುದ್ದ ಹೋಬಳಿ ಎಚ್. ಮೈಲನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರಂಗೇಗೌಡ (74) ಗಾಯಗೊಂಡ ವೃದ್ಧ. ಮನೆಯ ಎದುರಿನಲ್ಲಿ ನಿಂತಿದ್ದ ವೇಳೆ ಶಿಥಿಲಗೊಂಡಿದ್ದ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವೃದ್ಧ ರಂಗೇಗೌಡ ಮಣ್ಣಿನದಿಯಲ್ಲಿ ಸಿಲುಕಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ///
ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –  Hassan News Online – Crime News – Karnataka Crime News 
WebTitle : ಕ್ರೇನ್ ಉರುಳಿ ಒರ್ವ ಸಾವು : ಮೂವರಿಗೆ ಗಂಭೀರ ಗಾಯ – ಕನ್ನಡ ನ್ಯೂಸ್
Keyword : ಹಾಸನ ಸುದ್ದಿ – ಹಾಸನ್ ನ್ಯೂಸ್ – ಹಾಸನ ಕ್ರೈಂ ನ್ಯೂಸ್ -ಹಾಸನ – Hassan News – Hassan Suddi – Hassan Crime News – Hassan Kannada News – Hassan Police News – Hassan News Today