ಹಾಸನ : ಸಾಮೂಹಿಕ ಸತ್ಯಾಗ್ರಹ ಜಾಗರಣೆಗೆ ಮುಂದಾದ ಸಿಐಟಿಯು

Hassan-CITU mass protests on 14th August For the freedom of working people

0

ಹಾಸನ : ಸಾಮೂಹಿಕ ಸತ್ಯಾಗ್ರಹ ಜಾಗರಣೆಗೆ ಮುಂದಾದ ಸಿಐಟಿಯು

ಆ.14ರ ಸಂಜೆ 6ರಿಂದ 15ರ ಬೆಳಗ್ಗೆ 6 ಗಂಟೆವರಗೆ ದುಡಿಯುವ ಜನರ ಸ್ವಾತಂತ್ಯಕ್ಕಾಗಿ
ಸಿಐಟಿಯುನಿಂದ ‘ಸಾಮೂಹಿಕ ಸತ್ಯಾಗ್ರಹ ಜಾಗರಣೆ’

Hassan News Kannada

ಹಾಸನ : ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ಆಗಸ್ಟ್ 14ರ ಸಂಜೆ 6 ಗಂಟೆಯಿಂದ 15ರ ಬೆಳಗ್ಗೆ 6 ಗಂಟೆಯವರೆಗೆ ‘ದುಡಿಯುವ ಜನರ ಸ್ವಾತಂತ್ಯಕ್ಕಾಗಿ ಸಾಮೂಹಿಕ ಸತ್ಯಾಗ್ರಹ ಜಾಗರಣೆ’ ದೇಶದಾದ್ಯಂತ ಸಿಐಟಿಯು ಮತ್ತು ಎಐಕೆಎಸ್ ನೇತೃತ್ವದಲ್ಲಿ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನದಲ್ಲಿ ಆಗಸ್ಟ್ 14ರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರಾತ್ರಿಯಿಡೀ ಜನರ ಹಕ್ಕುಗಳ ರಕ್ಷಣೆಗಾಗಿ ಸಾಮೂಹಿಕ ಸತ್ಯಾಗ್ರಹ ಜಾಗರಣೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜನರ ಹಕ್ಕುಗಳು ಹಾಗೂ ಬೇಡಿಕೆಗಳ ಕುರಿತ ಸಂವಾದ, ಚರ್ಚೆ, ವಿಧ್ಯಾರ್ಥಿ ಯುವಜನರಿಗಾಗಿ ‘ನನ್ನ ಪರಿಕಲ್ಪನೆಯಲ್ಲಿ ಸ್ವಾತಂತ್ಯ’ ಎಂಬ ವಿಷೇಶ ಚರ್ಚಾ ಗೋಷ್ಟಿ, ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯಕ್ರಮ, ಜನ ಚಳುವಳಿಗೆ ಸಂಬಂಧಿಸಿದ ಚಲನಚಿತ್ರ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜನತೆಯ ಸ್ವಾತಂತ್ಯದ ರಕ್ಷಣೆಗಾಗಿ ನಡೆಯುತ್ತಿರುವ ಈ ದೇಶಪ್ರೇಮಿ ಹೋರಾಟಕ್ಕೆ ಸ್ವಾತಂತ್ಯ ಪ್ರೇಮಿಗಳೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸರ್ಕಾರ ಕೊಟ್ಟ ಮಾತು ನೆರವೆರಿಸಿಲ್ಲ – ಅಲ್ಪ ಸಂಖ್ಯಾತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ  – ಹಾಸನ

ದುಡಿಯುವ ಅಲ್ಪಸಂಖ್ಯಾತರಿಗೆ ನಿಜವಾದ ಸ್ವಾತಂತ್ರ್ಯ ಲಭಿಸಿಲ್ಲ. ವ್ಯಕ್ತಿಗಳ ಹಕ್ಕು ರಕ್ಷಣೆ ನಿಜವಾದ ಸ್ವಾತಂತ್ರ್ಯ. ಹಿಂದಿನ ಮತ್ತು ಇಂದಿನ ಸರಕಾರಗಳು ತಮ್ಮ ಆಡಳಿತವಧಿಯಲ್ಲಿ ಕೊಟ್ಟ ಭರವಸೆಯನ್ನು ಇಲ್ಲಿವರೆಗೂ ಈಡೇರಿಸಿರುವುದಿಲ್ಲ ಎಂದು ದೂರಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಕಳೆದ 3 ದಶಕಗಳಲ್ಲಿ ರೂಪಿಸಿದ ನವ ಉದಾರೀಕರಣ ನೀತಿಗಳು ನಮ್ಮ ದೇಶದಲ್ಲಿ ಬಹುಸಂಖ್ಯಾತ ಕಾರ್ಮಿಕರ ಮತ್ತು ಇತರೆ ದುಡಿಯುವ ಜನರ ಉತ್ತಮ ಬದುಕನ್ನು ಹಾಳು ಮಾಡಿವೆ ಎಂದರು.

ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ‘ಮೋದಿ ಸರ್ಕಾರ’ ಕಳೆದ ನಾಲ್ಕು ವರ್ಷಗಳಲ್ಲಿ ಅದರ ವೇಗವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಅಚ್ಚೆ ದಿನಗಳ ಘೋಷಣೆಯು ದೇಶದ ಶೇ.0.1 ರಷ್ಟು ಜನರಿಗೆ (ಬಂಡವಾಳದಾರರು – ಶ್ರೀಮಂತರು) ಲಾಭವಾಗಿವೆ. ಆದರೆ ಬಹುಸಂಖ್ಯಾತ ಶೇ.99.9% ರಷ್ಟು ಜನರಿಗೆ ಅವು ಕಷ್ಟದ ದಿನಗಳಾಗಿವೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಬೆಲೆಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗವು ಬಡವರ ಮತ್ತು ಶ್ರೀಮಂತರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿದೆ. ಸಾಲದೆಂಬಂತೆ ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್ ಬಂಡವಾಳದಾರರ ಸಾಲಗಳಲ್ಲಿ ಸುಮಾರು ರೂ.2.5 ಲಕ್ಷ ಕೋಟಿ ಸಾಲವನ್ನು ಕಟ್ಟಲಾರದ ಸಾಲವೆಂದು ಮೋದಿ ಸರ್ಕಾರ ತನ್ನ ಲೆಕ್ಕದಿಂದ ತೆಗೆದು ಹಾಕಲಾಗಿದೆ ಎಂದು ಹೇಳಿದರು.

ಮೋದಿ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ 44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ 4 ಕಾರ್ಮಿಕ ಸಂಹಿತೆಗಳಾಗಿ ಬಂಡವಾಳ ಪರ ತಿದ್ದುಪಡಿ ತರಲು ಹೊರಟಿದೆ.

ಈಗಾಗಲೇ “ವೇತನಗಳ ಕುರಿತು ಕಾರ್ಮಿಕ ಸಂಹಿತೆ ಮಸೂದೆ” ಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಅಲ್ಲದೆ ಇಂಡಸ್ಟ್ರಿಯಲ್ ಎಂಪ್ಲಾಯ್‍ಮೆಂಟ್ (ಸ್ಥಾಯಿ ಆದೇಶಗಳು) ಕಾಯ್ದೆಗೆ ತಿದ್ದುಪಡಿ ತಂದು ನಿಗದಿತ ಅವಧಿಯ ಉದ್ಯೋಗವನ್ನು (ಫಿಕ್ಸ್‍ಡ್ ಟರ್ಮ್ ಎಂಪ್ಲಾಯ್‍ಮೆಂಟ್) ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೊಳ್ಳಲು ಮುಕ್ತ ಅವಕಾಶ ನೀಡಿ ಖಾಯಂ ಸ್ವರೂಪದ ಕೆಲಸವಿಲ್ಲದಂತೆ ಮಾಡಿದೆ.

ಗುತ್ತಿಗೆ ಮತ್ತು ಇನ್ನಿತರ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನ ರೂಪಿಸುವ ಬದಲಿಗೆ NEEM, NETAP ಹೆಸರಿನಲ್ಲಿ ಟ್ರೈನಿಗಳನ್ನು ಉತ್ಪಾದನಾ ಕೆಲಸಗಳಲ್ಲಿ ನೇಮಿಸಿಕೊಳ್ಳಲು ಮಾಲೀಕರಿಗೆ ಮುಕ್ತ ಅವಕಾಶ ನೀಡಿದೆ.

ದೇಶದಲ್ಲಿ ಸ್ವಾತಂತ್ರ್ಯ ನಂತರದ ಸ್ವಾವಲಂಬಿ ಆರ್ಥಿಕತೆಯನ್ನು ಬೆಳೆಸುವ ಉದ್ದೇಶದಿಂದ ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಲಾಯಿತು. ಈ ಉದ್ದಿಮೆಗಳು ಪಾವತಿಸುವ ತೆರಿಗೆಗಳು ಮತ್ತು ಲಾಭಾಂಶವು ರಾಷ್ಟ್ರೀಯ ಖಜಾನೆಗೆ ದೊಡ್ಡ ಕೊಡುಗೆ ನೀಡಿವೆ.

ಹಾಸನ – ಮೋದಿ ಸರ್ಕಾರ ಲಾಭದ ಉದ್ದಿಮೆ ಹಿಂದೆ ಬಿದ್ದಿದೆ.

ಆದರೆ ಮೋದಿ ಸರ್ಕಾರ ಇಂದು ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆಗಳಾದ BEML, BEL, BHEL, HAL ಮುಂತಾದ ಉದ್ದಿಮೆಗಳ ಶೇರುಗಳನ್ನು ಖಾಸಗಿಯವರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು

ಐಸಿಡಿಎಸ್ ಯೋಜನೆಯಲ್ಲಿ ಶೇಕಡ.75 ಬಿಸಿಯೂಟದಲ್ಲಿ ಶೇಕಡ 40 ಅಂಗನವಾಡಿಯಲ್ಲಿ ಅನುದನ ಕಡಿತ ಮಾಡಿ ನೇರ ನಗದು ಕೊಡುವ ಮತ್ತು ಬಿಸಿಯೂಟದಲ್ಲಿ ಕೇಂದ್ರಿಕೃತ ಅಡುಗೆಮನೆಯನ್ನು ತರೆಯುವುದನ್ನು ವಿರೋಧಿಸಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಐಸಿಡಿಎಸ್, ಮಧ್ಯಾಹ್ನದ ಬಿಸಿಯೂಟ, ಆರೋಗ್ಯ, ಶಿಕ್ಷಣ, ಮೊದಲಾದ ಯೋಜನೆ ಅಡಿಯಲ್ಲಿ ಲಕ್ಷಾಂತರ ಅಂಗನವಾಡಿ, ಬಿಸಿಯೂಟ, ಆಶಾ ನೌಕರರು ಯಾವುದೇ ಕನಿಷ್ಟ ಕೂಲಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದ ಅವರು ತೀವ್ರವಾಗುತ್ತಿರುವ ಕಾರ್ಷಿಕ ಬಿಕ್ಕಟ್ಟು ಗ್ರಾಮೀಣ ಭಾರತದಲ್ಲಿ ಅಪಾರ ಸಂಕಷ್ಟ ಉಂಟುಮಾಡಿದೆ.

ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಲೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡಲು ಮೋದಿ ಸರ್ಕಾರ ಮುಂದಾಗುತ್ತಿಲ್ಲ.

ಇದರಿಂದ ದೇಶದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಅಲ್ಲದೆ ಮೋದಿ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‍ನಲ್ಲಿ ಹಣ ಕಡಿತ ಮಾಡಿ ಕೂಲಿಕಾರರ ಹೊಟ್ಟೆ ಮೇಲೆ ಬರೆ ಎಳೆದಿದೆ.

ಇಂತಹ ಸಂದರ್ಭದಲ್ಲಿ ಮೋದಿ ಸರ್ಕಾರದ ಕಾರ್ಪೊರೇಟ್ ಬಂಡವಾಳದಾರ ಪರ ನವ ಉದಾರೀಕರಣ ನೀತಿಗಳನ್ನು ಹಿಮ್ಮೆಟ್ಟಿಸಿ ಕೋಟ್ಯಾಂತರ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಕುಶಲಕರ್ಮಿಗಳು ಮತ್ತು ಇತರೆ ದುಡಿಯುವ ಜನರ ಸಮಸ್ಯೆಗಳನ್ನು ಮುಂಚೂಣಿಗೆ ತರಲು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಉತ್ತಮ ಜೀವನ, ಭವಿಷ್ಯಕ್ಕಾಗಿನ ಬೇಡಿಕೆಗಳಿಗಾಗಿ ಒತ್ತಾಯಿಸಿ BEML, BEL, BHEL, HAL ಜಂಟಿಯಾಗಿ 2018 ರ ಸೆಪ್ಟೆಂಬರ್ 5 ರಂದು ಸಂಸತ್ತಿನ ಮುಂದೆ “ಮಜ್ದೂರ್ ಕಿಸಾನ್ ಸಂಘರ್ಷ ರ್ಯಾಲಿ”ಯನ್ನು ಹಮ್ಮಿಕೊಳ್ಳಲಾಗಿದೆ

ಅದರ ಭಾಗವಾಗಿ ಆಗಸ್ಟ್ 9 ರಂದು ರೈತ-ಕಾರ್ಮಿಕರ ಜೈಲ್‍ಬರೋ ಚಳುವಳಿ ಹಾಗೂ ಆಗಸ್ಟ್ 14ರಂದು ಇಡೀ ರಾತ್ರಿ ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ಸಾಮೂಹಿಕ ಸತ್ಯಾಗ್ರಹ ಜಾಗರಣೆಯನ್ನು ದೇಶವ್ಯಾಪಿ ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಎಲ್ಲಾ ಸಂಘಟಿತ-ಅಸಂಘಟಿತ ಕಾರ್ಮಿಕರು, ರೈತರು, ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಉಪಾಧ್ಯಕ್ಷ ಕರಿಯಪ್ಪ, ಜಿ.ಪಿ. ಸತ್ಯಾನಾರಾಯಣ್, ಪ್ರಧಾನ ಕಾರ್ಯದರ್ಶಿ ಅರವಿಂದ್, ರಾಘವೇಂದ್ರ ಎಂ.ಬಿ. ಪುಷ್ಪ ಇತರರು ಪಾಲ್ಗೊಂಡಿದ್ದರು. //// ಇದನ್ನೂ ಓದಿ …ಹಾಸನ : ಪ್ರತಿ ಸುಟ್ಟ ದೇಶದ್ರೋಹಿ ಬಂಧಿಸಿ : ಸಂಪತ್ ಕುಮಾರ್


WebTitle : ಹಾಸನ : ಸಾಮೂಹಿಕ ಸತ್ಯಾಗ್ರಹ ಜಾಗರಣೆಗೆ ಮುಂದಾದ ಸಿಐಟಿಯು – Hassan-CITU mass protests on 14th August For the freedom of working people

ಇನ್ನಷ್ಟು ಕನ್ನಡ ನ್ಯೂಸ್ – ಕನ್ನಡ ಸುದ್ದಿ ಗಳಿಗೆ ತಪ್ಪದೆ ಕ್ಲಿಕ್ಕಿಸಿ –

Kannada Politics News | Kannada Film News | Kannada Crime News | Kannada Health Tips | Kannada Sports News | Kannada Daily Horoscope | Kannada Technology News | Kannada Jokes | Kannada Recipes

You're currently offline