ಎರಡು ವರ್ಷದೊಳಗೆ ಎತ್ತಿನ ಹೊಳೆ ಯೋಜನೆ ಪೂರ್ಣ

Kannada News (itskannada) Hassan :ಸಕಲೇಶಪುರ (ಹಾಸನ) : ಎರಡು ವರ್ಷದೊಳಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.ಎತ್ತಿನಹೊಳೆ ಯೋಜನೆ ಪ್ರದೇಶಕ್ಕೆ ಭೇಟಿ ನಡೆಸಿದ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಸಂಕೀರ್ಣವಾದ ಯೋಜನೆಯಾಗಿದ್ದು ನಿಗದಿತ ಅವಧಿಯಲ್ಲಿ ಕೆಲಸ ಮುಗಿಸುವುದು ಅಸಾಧ್ಯ. 2018 ರ ಮಾರ್ಚ್ ನಲ್ಲಿ ನೀರು ಹರಿಸುವ ಯೋಚನೆ ಇತ್ತಾದರೂ ನಿಗದಿತ ವೇಗದಲ್ಲಿ ಕಾಮಗಾರಿ ನಡೆಸಲು ಭೌಗೋಳಿಕ ಸನ್ನಿವೇಶ ಸಹಕರಿಸಿದ ಕಾರಣ ಕಾಮಗಾರಿ ವಿಳಂಬವಾಗಿದೆ. 2020 ರ ಜೂನ್ ವೇಳೆಗೆ ಬಹುತೇಕ ಕಾಮಗಾರಿ ಮುಕ್ತಾಯವಾಗುವ ಭರವಸೆ ಇದೆ ಎಂದರು.

ಈಗಾಗಲೇ ಈ ಯೋಜನೆ ಒಂದನೇ ಹಂತವಾದ ಕುಂಬರಡಿ ಎಸ್ಟೇಟ್ ನ ಚೆಕ್ ಡ್ಯಾಮ್ ಕಾಮಗಾರಿ ಶೇ. 70 ರಷ್ಟು ಮುಕ್ತಾಯವಾಗಿದ್ದು ಈ  ಚೆಕ್ ಡ್ಯಾಮ್ ಗೆ ವಿವಿಧ ಕಿರು ಚೆಕ್ ಡ್ಯಾಮ್ ಗಳಿಂದ ಸಂಗ್ರಹಿಸಿದ ನೀರನ್ನು ಇಲ್ಲಿಗೆ ತಂದು ಇಲ್ಲಿಂದ ದೊಡ್ಡನಾಗರದ ಮೂಲಕ 260 ಕಿ. ಮೀ. ದೂರದ ಬಿಳಿಗುಡ್ಲ ಜಲಾಶಯಕ್ಕೆ ಹರಿಸುವ ಕಾಮಗಾರಿ ಚುರುಕಾಗಿ ನಡೆಯುತ್ತಿದೆ ಎಂದರು.///Hassan News Online – Karnataka News