ಹಾಸನ : ರೈಲು ಡಿಕ್ಕಿಯಾಗಿ ಆನೆಗಳ ಸಾವು | ಕನ್ನಡ ನ್ಯೂಸ್

Two elephant calves die after hit by train | Kannada News

0 83

Kannada News (itskannada) ಹಾಸನ : ರೈಲು ಡಿಕ್ಕಿಯಾಗಿ ಆನೆಗಳ ಸಾವು | ಕನ್ನಡ ನ್ಯೂಸ್ : ಗೂಡ್ಸ್ ರೈಲಿಗೆ ಅಡ್ಡ ಬಂದ ಎರಡು ಮರಿಯಾನೆಗಳು ಮೃತಪಟ್ಟ ಘಟನೆ ಸಕಲೇಶಪುರ ತಾಲ್ಲೂಕಿನ ಕಾಗಿನಹರೆ ಸಮೀಪ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್  ರೈಲಿಗೆ ಸೋಮವಾರ ಬೆಳಗ್ಗಿನ ಜಾವ 71 ನೇ ಮೈಲು ಸಮೀಪ  ಎರಡು ಮರಿಯಾನೆಗಳು ಅಡ್ಡ ಬಂದಿವೆ. ಡಿಕ್ಕಿ ರಭಸಕ್ಕೆ ಅವು ಸ್ಥಳದಲ್ಲೇ ಮೃತಪಟ್ಟಿವೆ. ಮಂಗಳೂರಿನಿಂದ ಬೆಂಗಳೂರಿಗೆ ಸರಕು ರೈಲು ಹಾದುಹೋಗುವಾಗ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಒಂದು ಆರು ತಿಂಗಳ ವಯಸ್ಸಿನ ಮತ್ತು ಇನ್ನೊಂದು ಒಂದು ವರ್ಷದ ಆಸುಪಾಸಿನ ಆನೆಗಳಾಗಿವೆ.

ಸೋಮವಾರ ಬೆಳಿಗ್ಗೆ ಘಟನೆಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಗೆ ತಿಳಿಸಿದ್ದಾರೆ.ಹಾಸನ  ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಈ ಬಗ್ಗೆ ಮಾತನಾಡಿ. ಮರಣೋತ್ತರವನ್ನು ಸ್ಥಳದಲ್ಲಿಯೇ ನಡೆಸಲಾಯಿತು ಮತ್ತು ಮೃತ ದೇಹವನ್ನು ಸುಟ್ಟುಹಾಕಲಾಯಿತು, ಹಾಗೂ ಘಟನೆ ನಡೆದಿರುವ ಈ ಸ್ಥಳಕ್ಕೆ ಬರಲು 13 ಕಿ.ಮೀ ನಷ್ಟು ಬೆಟ್ಟ ಗುಡ್ಡ ಹಾದು ಬರಬೇಕಾಯಿತು ಎಂದರು.

ಇದರಿಂದ ರೈಲು ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು. ಮರಿಯಾನೆ ಜೊತೆಗೆ ಮತ್ತೊಂದು ಆನೆ ಮೃತಪಟ್ಟಿರುವ ಸಂಶಯವಿದ್ದು  ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಾಣವಾದಲ್ಲಿ ಮಾತ್ರ ವನ್ಯಜೀವಿಗಳಿಗೆ ಹಾಗೂ ಜನಸಾಮಾನ್ಯರ ರಕ್ಷಣೆ ಸಾಧ್ಯ. ಜೊತೆಗೆ ರೈಲು ಹಳಿಗಳ ಎರಡೂ ಬದಿಯಲ್ಲೂ ಬೇಲಿ ಹಾಕಬೇಕೆಂಬ ಯೋಜನೆ ಇದ್ದರೂ ಇನ್ನು ಕಾರ್ಯಗತವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. /// Hassan – Hassan News Online

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!