ಕ್ರೇನ್ ಉರುಳಿ ಒರ್ವ ಸಾವು : ಮೂವರಿಗೆ ಗಂಭೀರ ಗಾಯ – ಕನ್ನಡ ನ್ಯೂಸ್

0 37

Kannada News (itskannada) Hassanಸಕಲೇಶಪುರ (ಹಾಸನ): ಕ್ರೇನ್ ಉರುಳಿ ಒರ್ವ ಸಾವು : ಮೂವರಿಗೆ ಗಂಭೀರ ಗಾಯ-One death and Three serious injuries in Hassan : ಶಿರಾಡಿ ಘಾಟ್ ಸಮೀಪ ನಡೆಯುತ್ತಿರುವ ಮಾರುತಿ ಪವರ್ ಜೆನ್ ಜಲ ವಿದ್ಯುತ್ ಕಾಮಗಾರಿ ಸ್ಥಳದಲ್ಲಿ ಆಕಸ್ಮಿಕವಾಗಿ ಕ್ರೇನ್ ಉರುಳಿ ಯೋಜನೆಯ ಇಂಜಿನಿಯರ್ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ,  ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕ್ರೇನ್ ಉರುಳಿ ಒರ್ವ ಸಾವು : ಮೂವರಿಗೆ ಗಂಭೀರ ಗಾಯ – ಕನ್ನಡ ನ್ಯೂಸ್

ಹುಣಸೂರು ತಾಲ್ಲೂಕು ಕಟ್ಟೆಮರಳವಾಡಿ ಗ್ರಾಮದ ಮಹೇಶ್ (28) ಮೃತ ದುರ್ದೈವಿ. ಕಡಿದಾದ ಸ್ಥಳದಲ್ಲಿ ಕಾಮಗಾರಿಗೆಂದು ಕ್ರೇನ್ ಬಳಕೆ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದ್ದು, ಇನ್ನುಳಿದಂತೆ ಸೋನು, ಅಭಯ್ ಹಾಗೂ ಪರ್ವೇಜ್ ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ಕರೆದೊಯ್ಯಲಾಗಿದೆ.

ಬೆಳಗ್ಗೆಯೇ ಈ ಘಟನೆ ನಡೆದಿದ್ದರು ಕೂಡ, ಮೃತ ಮಹೇಶ್ ಕುಟುಂಬಕ್ಕೆ ವಿಷಯ ತಿಳಿಸದೇ ಸಂಸ್ಥೆಯವರು ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿಯೇ ರಾತ್ರಿ 9 ಗಂಟೆಯಾದರೂ ಮಹೇಶ್ ಸಂಬಂಧಿಗಳು ಸಕಲೇಶಪುರಕ್ಕೆ ಬರಲ್ಲಾಗಿಲ್ಲ ಎಂದು  ಸ್ಥಳೀಯರು ಸಂಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಯೋಜನೆ ನಡೆಯುತ್ತಿರುವ ಸ್ಥಳದಲ್ಲಿ  ಅನೇಕ ಸಾವು- ನೋವುಗಳು ಸಂಭವಿಸಿವೆ. ಕಾರ್ಮಿಕರು ಕಣ್ಮರೆಯಾಗಿದ್ದಾರೆ ಈ ಸಂಬಂಧ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದು, ಪೊಲೀಸರು ಪ್ರಕರಣದ ಕುರಿತು ಗಂಭೀರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ///
ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –  Hassan News OnlineCrime NewsKarnataka Crime News 
WebTitle : ಕ್ರೇನ್ ಉರುಳಿ ಒರ್ವ ಸಾವು : ಮೂವರಿಗೆ ಗಂಭೀರ ಗಾಯ – ಕನ್ನಡ ನ್ಯೂಸ್
Keyword : ಹಾಸನ ಸುದ್ದಿ – ಹಾಸನ್ ನ್ಯೂಸ್ – ಹಾಸನ ಕ್ರೈಂ ನ್ಯೂಸ್ -ಹಾಸನ – Hassan News – Hassan Suddi – Hassan Crime News – Hassan Kannada News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!