ಹಾಸನ ಜನತೆಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

0 28

Kannada News (itskannada) Hassan : ಹಾಸನ ಜನತೆಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ : ಹಾಸನ : ನಗರದ ಜನತೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ, ಅದೇನೆಂದರೆ ಹಾಸನ ಬಸ್ ನಿಲ್ದಾಣದ ಬಳಿ ರೈಲ್ವೆ ಇಲಾಖೆ ಮೇಲ್ಸೇತುವೆ ನಿರ್ಮಿಸಲು ಟೆಂಡರ್ ಕರೆದಿದೆ.

ಇಂದು ರೈಲ್ವೆ ಇಲಾಖೆ ಟೆಂಡರ್ ಕರೆದಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಚಿಂತನೆ ನಡೆಸಿದೆ. ಇನ್ನು ಈ ಕಾಮಗಾರಿಯು ಸುಮಾರು 45 ಕೋಟಿ ರೂ, ಗಳನ್ನು ಒಳಗೊಂಡಿದೆ.

ಬಸ್ ನಿಲ್ದಾಣದಿಂದ ನಗರಕ್ಕೆ ಸಂಚರಿಸುವ ವಾಹನಗಳು ಈ ಮಾರ್ಗದಿಂದ ಸಂಚರಿಸಬೇಕಿತ್ತು. ಇನ್ನು ಚಾಲಕರು ವಾಹನ ಚಾಲನೆ ಮಾಡುವಾಗ ರೈಲ್ವೆ ಹಳಿ ದಾಟಲು ಹರಸಾಹಸ ಪಡುವಂತಾಗಿತ್ತು. ಈ ಕಾಮಗಾರಿಗಾಗಿ ಜಿಲ್ಲೆಯ ಜನತೆ ಕಳೆದ 15 ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಈಗ ಈ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ಜಿಲ್ಲೆಯ ಜನತೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದಂತಾಗಿದೆ. /// Hassan News OnlineKarnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!