ಗದಗ-ಬಿ.ಜೆ.ಪಿ ಸಮಾವೇಶಕ್ಕೆ ಪ್ರತಿಭಟನೆಯ ಕಾವು

protest against Gadag BJP convention

39

Gadag : (itskannada) ಗದಗ-ಬಿ.ಜೆ.ಪಿ ಸಮಾವೇಶಕ್ಕೆ ಪ್ರತಿಭಟನೆಯ ಕಾವು-protest against Gadag BJP convention : ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಬಿಜೆಪಿ ಪರ ಪ್ರಚಾರ ಮಾಡಲು ಆಗಮಿಸುತ್ತಿದ್ದು, ಗದಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಪ್ರತಿಭಟನೆಯ ಕಾವು ತಾಕಿದೆ.
ಮಹದಾಯಿ ನದಿ ವಿವಾದ ಇತ್ಯರ್ಥ ವಿಚಾರದಲ್ಲಿ ಪ್ರಧಾನಿ ಮೋದಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಅವರ ಮೇಲೆ ಹೋರಾಟಗಾರರಿಗೆ ಮುನಿಸಿದೆ. ಪ್ರತಿಭಟನೆಗೆ ಸ್ಪಂದಿಸದ ಪ್ರಧಾನಿ ಈಗ ಯಾಕೆ ಬರುತ್ತಿದ್ದಾರೆ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.
ಹೀಗಾಗಿ ಇಂದು ಮಧ್ಯಾಹ್ನ ಗದಗದಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರ ಸಮಾವೇಶಕ್ಕೆ ಪ್ರತಿಭಟನೆಯ ಮುನ್ಸೂಚನೆ ಸಿಕ್ಕಿದೆ. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೌನ ವಹಿಸಿದ್ದಾರೆ ಎಂಬುದು ಹೋರಾಟಗಾರರ ಆಕ್ರೋಶಕ್ಕೆ ಕಾರಣ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Gadag News Online – Politics – Karnataka Politics News – Kannada News – Karnataka News

Gadag News Kannada

Open

error: Content is protected !!