ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ

Kannada News (itskannada) Dharwad – ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ

ಧಾರವಾಡ:  ಹುಬ್ಬಳ್ಳಿಯಲ್ಲಿ ಯುವಕನೊಬ್ಬ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇದನ್ನು ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಪುಂಡರು , ಯುವಕರು ಸುಲಭವಾಗಿ ತಲ್ವಾರ್ ಉಪಯೋಗಿಸುವುದನ್ನು ನೋಡಿ ಹುಬ್ಬಳ್ಳಿಗರು ಬೆಚ್ಚಿ ಬಿದ್ದಿದ್ದಾರೆ.  ಶುಭಂ ಬಿಜವಾಡ ಎಂಬ ಯುವಕ ಅವನ ಹುಟ್ಟು ಹಬ್ಬವನ್ನು ತಲ್ವಾರ್ ನಿಂದ ಕೇಕ್ ಕತ್ತರಿಸಿ ಡಾನ್ ರಿತಿಯೋ , ಪಾತಕಿ ರಿತಿಯೋ ಆಚರಿಸಿಕೊಂಡಿದ್ದಾನೆ.

ತನ್ನ ಅಂಗಡಿ ಮಹಡಿಯ ಮೇಲೆ ತಲ್ವಾರ್ ನಿಂದ ಕೇಕ್ ಕತ್ತರಿಸುತ್ತಾ ಮತ್ತು  ಹಾಲಿನ ಅಭಿಷೇಕ ಮಾಡಿಕೊಂಡಿರುವ ಶುಭಂನ ಈ  ವೀಡಿಯೂ ಫೇಸ್ಬುಕ್ ನಲ್ಲಿ ವೈರಲ್ ಆಗಿದ್ದು, ಪರ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿಗೆ ಇರ್ಶಾದ್ ಎಂಬಾತ ಕೂಡ ತಲ್ವಾರ್ ನಿಂದ ಕೇಕ್ ಕತ್ತರಿಸಿ, ತಲ್ವಾರ್ ನಿಂದಲೇ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡು ಸುದ್ದಿಯಾಗಿದ್ದನು. ಈಗ ಅದೇ ರೀತಿ ಮತ್ತೊಬ್ಬ  ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಸಾಲಿಗೆ ಇದೂ ಸೇರ್ಪಡೆ .
ಈ ಯುವಕರ ತಲ್ವಾರ್ ಹುಚ್ಚು , ಅದು ಯಾವಾಗ ನಿಲ್ಲುತ್ತದೋ ನೋಡಬೇಕಾಗಿದೆ…..