ಧಾರವಾಡ : ಮಳೆ ಅವಾಂತರಕ್ಕೆ ಉರುಳಿದ ಕಂಬಗಳು

Kannada News(itskannada) Dharwad ಧಾರವಾಡ : ಮಳೆ ಅವಾಂತರಕ್ಕೆ ಉರುಳಿದ ಕಂಬಗಳು

ರಾಜ್ಯದಲ್ಲಿ ಬೆಂಬಿಡದೇ ಸುರಿಯುತ್ತಿರುವ ಮಳೆಗೆ ಜನರು ಹೈರಾಣರಾಗಿದ್ದಾರೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಹುಬ್ಬಳಿ ಧಾರವಾಡ ಮಧ್ಯೆ ಆಗುತ್ತಿರುವ ಬಿ.ಆರ್.ಟಿ.ಎಸ್ ಕಾಮಗಾರಿ ಮುಗಿಯದ ಪರಿಣಾಮ ಜನರು ತೀರಾ ಬೇಸತ್ತು ಹೋಗಿದ್ದಾರೆ.

ಧಾರವಾಡ : ಮಳೆ ಅವಾಂತರಕ್ಕೆ ಉರುಳಿದ ಕಂಬಗಳು

ಇವತ್ತು ಬಿಡದ ಮಳೆಗೆ ನಗರದಲ್ಲಿ ಅವಾಂತರ ನಡೆದಿದೆ.  ಹುಬ್ಬಳ್ಳಿಯ ನವನಗರದ ಆರ್.ಟಿ.ಓ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಬಳಿ 12ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿದೆ. ವಿದ್ಯುತ್ ಕಂಬಗಳ ಕಾಮಗಾರಿ ಕಳಪೆಯಾಗಿದ್ದರಿಂದ,  ಸುರಿದ ಮಳೆಗೆ ಮಣ್ಣು ಸಡಿಲಗೊಂಡು ಕಂಬಗಳು ನೆಲಕ್ಕೆ ಉರುಳಿದೆ.
ಪರದಾಡಿದ ಜನರು
ಮಳೆಯಿಂದ ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಿದ್ದಿದ್ದರಿಂದ ಸಾರ್ವಜನಿಕರು ಅಡ್ಡಾಡಲು ಕೆಲಕಾಲ ಹರಸಾಹಸ ಪಡಬೇಕಾಯಿತು.  ಟ್ರಾಫಿಕ್ ಸಮಸ್ಯೆಯನ್ನು ಪೋಲೀಸರು ಹೇಗೋ ಸರಿಪಡಿಸಿದ್ದಾಯಿತು , ಆದರೆ ಆರ್.ಟಿ.ಓ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆ
ಅಧಿಕಾರಿಗಳ ವಾಹನ ಕಛೆರಿಯಲ್ಲಿದ್ದವು  ಅವುಗಳನ್ನು ಹೊರ ತೆಗೆಯಲು ಪರದಾಡಿದರು.
ಸಾರ್ವಜನಿಕರು ಬಿ ಆರ್ ಟಿ ಎಸ್ ಕಾಮಗಾರಿ  ವಿರುದ್ಧ ಹಿಡಿ ಶಾಪ ಹಾಕುತ್ತಿದ್ದು  ಬಿಆರ್.ಟಿಎಸ್ ಕಾಮಗಾರಿ ಬೇಗನೆ ಮುಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ… /// Dharwad News Online