ಹುಬ್ಬಳ್ಳಿ-ಧಾರವಾಡ : ನಾಳೆ ಹೋಟೆಲ್ ಬಂದ್

Kannada News (itskannada) ಹುಬ್ಬಳ್ಳಿ-ಧಾರವಾಡ : ನಾಳೆ ಹೋಟೆಲ್ ಬಂದ್ : ದಿನದಿಂದ ದಿನಕ್ಕೆ  ನಗರದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ನಾಳೆ ಹೋಟೆಲ್ ಮಾಲೀಕರು ಬಂದ್ ಮಾಡಲಿದ್ದಾರೆ. ಅಲ್ಲದೆ ಇತ್ತೀಚೆಗೆ  ಫಿಶ್ ಲ್ಯಾಂಡ್ ಹೋಟೆಲ್ ಮಾಲೀಕನ ಮೇಲೆ ಪುಂಡಾಟ ನಡೆಸಿದ ಫಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು.

ಹುಬ್ಬಳ್ಳಿ-ಧಾರವಾಡ : ನಾಳೆ ಹೋಟೆಲ್ ಬಂದ್

 ದೌರ್ಜನ್ಯ ಖಂಡಿಸಿ ಹೋಟೆಲ್ ಉದ್ಯಮದವರು ನಾಳೆ ಅವಳಿನಗರ ಹುಬ್ಬಳ್ಳಿ -ಧಾರವಾಡದಲ್ಲಿ ಹೋಟೆಲ್  ಬಂದ್ ಗೆ ಕರೆ ನೀಡಿದ್ದಾರೆ.  ಇದಕ್ಕೆ ಸ್ವೀಟ್ ಮಾರ್ಟ್, ಬೇಕರಿ, ಖಾನಾವಳಿ,  ಬಾರ್ ಎಂಡ್ ರೆಸ್ಟೋರೆಂಟ್,  ಬೀದಿ ವ್ಯಾಪಾರಸ್ಥರು ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿ ಬಂದ್ ಮಾಡಲಿದ್ದಾರೆ.
ನಾಳೆ ಬೆಳಿಗ್ಗೆ 10.30 ಕ್ಕೆ ಸಂಘದ ಕಛೇರಿಯಿಂದ ಮೆರವಣಿಗೆ ಹೊರಟು ದುರ್ಗದಬೈಲ್,  ದಾಜಿಬಾನ್ ಪೇಟೆ, ಸಂಗೊಳ್ಳಿರಾಯಣ್ಣ ವೃತ್ತದ ಮೂಲಕ ತಹಶೀಲ್ದಾರರ ಕಛೇರಿ ತಲುಪಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಿದ್ದಾರೆ.
ಇತ್ತೀಚಿನ ದಿನದಲ್ಲಿ ಹೋಟೆಲ್ ಉದ್ಯಮ ಹಾಗೂ ನೌಕರರ ಮೇಲೆ ಆಗುತ್ತಿರುವ ಹಲ್ಲೆ ತಡೆಗಟ್ಟಬೇಕು. ಅಲ್ಲದೆ ಅವಳಿ ನಗರಗಳಲ್ಲಿ ಹೆಚ್ಚಾಗುತ್ತಿರುವ ಕ್ರೈಂ ತಡೆಗಟ್ಟಲು ವಿಶೇಷ ತಂಡ ರಚಿಸಬೇಕು , ಗುಂಡಾಗಿರಿ ಹತ್ತಿಕಬೇಕು ಎಂದು ಹೋಟೆಲ್ ಉದ್ಯಮ ಸಂಘ ಒತ್ತಾಯಿಸುತ್ತಿದೆ.  ಈ ಮೆರವಣಿಗೆಯಲ್ಲಿ ಸರಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ.  ////