ನಂದಿಗಿರಿಧಾಮಕ್ಕೆ ವಿಶೇಷ ಮಾನ್ಯತೆ

Special recognition for Nandi Hills | itskannada

0

ಚಿಕ್ಕಬಳ್ಳಾಪುರ: ( itskannada )ಪ್ರಕೃತಿ ಸೊಬಗಿನ ವಿಶ್ವ ಪ್ರಸಿದ್ಧ ನಂದಿಗಿರಿಧಾಮಕ್ಕೆ ವಿಶೇಷ ಮಾನ್ಯತೆ ದೊರೆಯುತ್ತಿದೆ.ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ ವಿಶೇಷ ಮಾನ್ಯತೆ ಕಲ್ಪಿಸಲು ಮುಂದಾಗಿರುವ ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್, ರಾಷ್ಟ್ರೀಯ ಕಾನೂನು ಶಾಲೆ ನೇತೃತ್ವದಲ್ಲಿ ನಂದಿಬೆಟ್ಟದ ಅಧ್ಯಯನ ಆರಂಭಿಸಿದೆ.

ನಂದಿಗಿರಿಧಾಮಕ್ಕೆ ವಿಶೇಷ ಮಾನ್ಯತೆ

ನಂದಿ ಗಿರಿಧಾಮವು ಊಟಿಯಂತೆ ಅತಿ ಮಹತ್ವದ, ಆಕರ್ಷಕ ತಾಣ, ಶುದ್ಧ ಆಮ್ಲಜನಕ ಹಾಗೂ ನಾನಾ ನದಿಗಳ ಉಗಮ ಸ್ಥಳವಿದು. ಆದರೆ ಇಲ್ಲಿ ಒಂದು ದಶಕದಿಂದೀಚೆಗೆ ಪ್ರವಾಸೋದ್ಯಮ, ಗಣಿ ಮತ್ತು ಅರಣ್ಯ ಸೇರಿ ನಾನಾ ಇಲಾಖೆಗಳಿಂದ ಗೊತ್ತುಗುರಿಯಿಲ್ಲದಂತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.ಸುಂದರವಾದ ಕಲಾಕೃತಿಗಳನ್ನು ಚೋಳರು, ಕಂಬಗಳ ಮೇಲೆ ಕೆತ್ತನೆ ಮಾಡಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಇದರೊಂದಿಗೆ ವಿಜಯನಗರ ರಾಜರುಗಳು ನಿರ್ಮಿಸಿರುವ ಕಲ್ಯಾಣ ಮಂಟಪ ಮತ್ತು ತುಲಾಭಾರ ಮಂಟಪಗಳಿವೆ.ಭೋಗ ನಂದೀಶ್ವರ ದೇವಾಲಯಕ್ಕೆ ಹೋಗುವುದು ಹೇಗೆ? ಇದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.

ಹೋಟೆಲ್, ರೆಸಾರ್ಟ್ ಹೆಚ್ಚಾಗಿವೆ. ಡ್ರಿಂಕ್ಸ್-ಡ್ರಗ್ಸ್ ನೊಂದಿಗೆ ಮೋಜು-ಮಸ್ತಿ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರವಾಸಿಗರು ಹಾಗೂ ಟ್ರಕ್ಕಿಂಗ್ ಹೋಗುವವರಿಂದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೆಚ್ಚಾಗುತ್ತಿದೆ. ಇವೆಲ್ಲದರ ಪರಿಣಾಮ ಈ ಹಿಂದೆ 3 ಬಾರಿ ಬೆಂಕಿಯೂ ಕಾಣಿಸಿಕೊಂಡಿತ್ತು.ನಂದಿಗಿರಿಧಾಮದ ಕೆಲವೇ ಕಿ.ಮೀ ದೂರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಸುಮಾರು 450-500 ವಿಮಾನಗಳು ಇಲ್ಲಿಂದ ಹಾರುತ್ತದೆ. ನಿತ್ಯ ವಿಮಾನಗಳು ಉಗುಳುವ ಹೊಗೆಯಿಂದ ಸುತ್ತಮುತ್ತಲ ಪರಿಸರ ಮಲಿನಗೊಂಡಿದೆ. ಹೀಗಾಗಿ ನಂದಿಬೆಟ್ಟಕ್ಕೆ ವಿಶೇಷ ಮಾನ್ಯತೆ ದೊರಕಿಸಿಕೊಟ್ಟು ಅದನ್ನು ಕಾಪಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹಲವು ಯೋಜನೆಗಳು: ನಂದಿಬೆಟ್ಟದಲ್ಲಿ ಹಸಿರು ಪಟ್ಟಿ ತಯಾರಿಸುವುದು, ನದಿಗಳನ್ನು ಪುನರುಜ್ಜೀವನಗೊಳಿಸಿ ಪ್ರಾಣವಾಯುವನ್ನು ಸಂರಕ್ಷಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಕೆಲಸಗಳೂ ನಡೆಯುತ್ತಿದೆ. ಗಿರಿಧಾಮದಲ್ಲಿ ಒಂದು ಲಕ್ಷ ಸ್ಥಳೀಯ ಸಸ್ಯಗಳನ್ನು ನಡೆವುದು, 14 ಕಲ್ಯಾಣಿಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ. ನಂದಿಬೆಟ್ಟವು ಚಿಕ್ಕಬಳ್ಳಾಪುರದಿಂದ 10 ಕಿ.ಮೀ ಹಾಗೂ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. |  Chikkaballapur News


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ ವಿಭಾಗ –Chikkaballapur News Online– ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ – Chikkaballapur News Kannada – ಕ್ಲಿಕ್ಕಿಸಿ. for more News in Chikkaballapur City / District click –Chikkaballapur News Online– or – Chikkaballapur News Kannada–   itskannada : News-Entertainment-Information : for latest Today news or more in Karnataka Kannada News click Kannada News or look at Karnataka News .

You're currently offline