ಮತದಾರರನ್ನು ಸೆಳೆಯಲು-ಅಶ್ಲೀಲ ನೃತ್ಯ

Adult Dance To catch voters-itskannada

59
ಸಾಂಧರ್ಭಿಕ ಚಿತ್ರ

Kannada News : ( itskannada) : chikkaballapur – ಮತದಾರರನ್ನು ಸೆಳೆಯಲು ಇನ್ನಿಲ್ಲದ ಸರ್ಕಸ್ ಗಳು ನಡೆಯುತ್ತಲೇ ಇವೆ , ಅದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇದೀಗ ಅಶ್ಲೀಲ ನೃತ್ಯಗಳ ಸರದಿ. ಮತದಾರರನ್ನು ಹಿಡಿದಿಡುವ ಉದ್ದೀಶದಿಂದ ಅಶ್ಲೀಲ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು , ಹೆಂಡ ಸಾರಾಯಿ   ಹಂಚುವುದು ,ಬಾರೀ ಬಾಡೂಟ , ಸೀರೆ ಹಂಚುವುದು ಈಗೆ ಮತದಾರರ ಮೇಲೆ ಅಸ್ತ್ರಗಳು ನಡೆಯುತ್ತಲೇ ಇವೆ. ಇದೀಗ ಅಶ್ಲೀಲ ನೃತ್ಯಗಳ ಸರದಿ.

ಹೌದು ಇಂತಹದೊಂದು ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗೇಪಲ್ಲಿ ವಿಧಾನಸಭೆ ವ್ಯಾಪ್ತಿಯ ವರ್ಲಕೊಂಡ ಗ್ರಾಮದಲ್ಲಿ , ಗ್ರಾಮಕ್ಕೆ ಶಾಸಕ ಸುಬ್ಬಾರೆಡ್ಡಿ ಪ್ರಚಾರಕ್ಕೆ ಬರುವ ಉದ್ದೇಶದಿಂದ ಸಾರ್ವಜನಿಕರನ್ನು ಒಂದೆಡೆ ಸೇರಿಸಲು ತೃತೀಯ ಲಿಂಗಿಗಳಿಂದ ಅಶ್ಲೀಲವಾಗಿ ನೃತ್ಯ ಮಾಡಿಸಲಾಗಿದೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೇ , ಹಾಗೂ ಇದರ ಬಗ್ಗೆ ಹಲವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.  ನೃತ್ಯವನ್ನು ನಿಲ್ಲಿಸಲು ಅಥವಾ ವಿರೋದಿಸುವ ಗೋಜಿಗೂ ಮುಖಂಡರು ಹೋಗದೇ ಇರುವುದು ವಿಪರ್ಯಾಸದ ಸಂಗತಿ. //

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Crime News-Karnataka Crime News-Kannada News-Karnataka News – Chikkaballapur News Online –  Karnataka Politics News

 

Open

error: Content is protected !!