ಮಗನಿಗೆ ತಪ್ಪಿದ ಟಿಕೆಟ್-ಆಘಾತದಿಂದ ತಂದೆ ಸಾವು

29

Chikkaballapur : ( itskannada) ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಆಘಾತಕ್ಕೊಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಶಿಡ್ಲಘಟ್ಟ ಶಾಸಕ ರಾಜಣ್ಣ ಅವರ ತಂದೆ ಎಂ.ಪಿ. ಮುನಿಯಪ್ಪ ಮೃತಪಟ್ಟವರು. ಶಾಸಕ ರಾಜಣ್ಣ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿ ಜೆಡಿಎಸ್ ನಿಂದ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ರವಿಕುಮಾರ್ ಅವರಿಗೆ ಟಿಕೆಟ್ ನೀಡಲಾಯಿತು.

ಇದರಿಂದ ವಿಚಲಿತರಾದ ಮುನಿಯಪ್ಪ ಕಳೆದ ಮೂರು ದಿನಗಳಿಂದ ಯಾರೊಂದಿಗೂ ಮಾತನಾಡಿರಲಿಲ್ಲ. ಇದೀಗ ಆಘಾತದಿಂದ ಸಾವಿಗೆ ಶರಣಾಗಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ . . Chikkaballapur News Online

Open

error: Content is protected !!