ಚಾಮರಾಜನಗರ-ತಾಲೂಕು ಮಟ್ಟದ ತನಿಖಾ ತಂಡದಿಂದ ವಿಶ್ವ ತಂಬಾಕುರಹಿತ ದಿನ ಆಚರಣೆ

World No Tobacco Day is celebrated Chamarajanagar

0 69

Kannada News (itskannada) Chamarajanagar :ತಾಲೂಕು ಮಟ್ಟದ ತನಿಖಾ ತಂಡದಿಂದ ವಿಶ್ವ ತಂಬಾಕುರಹಿತ ದಿನ ಆಚರಣೆ : ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ಕೋಟ್ಪಾ – 2003ರ ತಾಲೂಕು ಮಟ್ಟದ ತನಿಖಾ ತಂಡದಿಂದ ವಿಶ್ವ ತಂಬಾಕು ದಿನ ಕುರಿತು ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಚಾಮರಾಜನಗರ :ತಾಲೂಕು ಮಟ್ಟದ ತನಿಖಾ ತಂಡದಿಂದ ವಿಶ್ವ ತಂಬಾಕುರಹಿತ ದಿನ ಆಚರಣೆ

ಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ತಾಲೂಕು ತಹಸೀಲ್ದಾರ್ ಟಿ. ರಮೇಶ್ ಬಾಬು ಅವರು ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ತಂಬಾಕು ಸೇವನೆ ಹೃದಯಕ್ಕೆ ಹಾನಿ ಎಂಬ ಘೋಷವಾಕ್ಯದೊಂದಿಗೆ ವಿಶ್ವ ತಂಬಾಕು ರಹಿತ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ತಂಬಾಕು ತ್ಯಜಿಸಲು ನಾಗರಿಕರಿಗೆ ಹಾಗೂ ಯುವಜನರಿಗೆ ಅರಿವು ಮೂಡಿಸಬೇಕಾಗಿದೆ. ಅಲ್ಲದೆ ಜನಸಂದಣಿ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ತಾಲೂಕು ಮಟ್ಟದ ತನಿಖಾ ತಂಡದ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರು ಕೋಟ್ಪಾ ಕಾಯ್ದೆ ಕುರಿತು ವಿವರವಾಗಿ ಮಾತನಾಡಿ ಈ ಕಾಯಿದೆಯಡಿ ಸೆಕ್ಷನ್ 4ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಸೆಕ್ಷನ್ 21ರ ಅಡಿಯಲ್ಲಿ 200 ರೂ.ಗಳ ದಂಡ ವಿಧಿಸಲಾಗುತ್ತದೆ ಎಂದರು.

ಸೆಕ್ಷನ್ 5ರನ್ವಯ ತಂಬಾಕು ಸಂಬಂಧ ಜಾಹಿರಾತು ಪ್ರಚಾರಕ್ಕೆ ನಿಷೇಧ ಮಾಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಸೆಕ್ಷನ್ 22ರ ಅಡಿಯಲ್ಲಿ 1000 ರೂ.ವರೆಗೆ ದಂಡ ಹಾಗೂ ಸೆರೆವಾಸ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ಸೆಕ್ಷನ್ 6ಎ ಅನ್ವಯ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಖರೀದಿಗಳ ಮೇಲೆ ನಿಷೇಧ ಹೇರಲಾಗಿದೆ. ಸೆಕ್ಷನ್ 6ಬಿ ಅನ್ವಯ ಶಾಲಾ ಕಾಲೇಜುಗಳ 100 ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ತಪ್ಪಿದಲ್ಲಿ ಸೆಕ್ಷನ್ 24ರಡಿಯಲ್ಲಿ ರೂ.200ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಸೆಕ್ಷನ್ 7ರ ಅನ್ವಯ ತಂಬಾಕು ಉತ್ಪನ್ನ ಪ್ಯಾಕೆಟ್‍ಗಳ ಎರಡು ಬದಿಯಲ್ಲಿ ಶೇ.85ರಷ್ಟು ಆರೋಗ್ಯ ಮುನ್ನೆಚ್ಚರಿಕೆ ಚಿತ್ರಣ ಅಳವಡಿಸುವುದನ್ನು ಉಲ್ಲಂಘಿಸಿದಲ್ಲಿ ಸೆಕ್ಷನ್ 20ರ ಅಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಮಾಲೀಕ ಅಥವಾ ವಾರಸುದಾರರಿಗೆ ಮೊದಲ ಬಾರಿ 100 ರೂ. ದಂಡ, ಒಂದು ವರ್ಷ ಸೆರೆವಾಸ. ತದನಂತರ ರೂ.3000 ದಂಡ, 2 ವರ್ಷ ಸೆರೆವಾಸ ಅಥವಾ ಈ ಎರಡನ್ನೂ ವಿಧಿಸಬಹುದು ಎಂದು ಡಾ. ಶ್ರೀನಿವಾಸ್ ಅವರು ತಿಳಿಸಿದರು.
ಸಭೆಯಲ್ಲಿ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ವನಜಾಕ್ಷಿ, ಪಟ್ಟಣ ಪೊಲೀಸ್ ಇಲಾಖೆಯ ಗ್ರಾಮಾಂತರ ಪಿಎಸ್‍ಐ ಕಿರಣ್ ಕುಮಾರ್, ಶಿಕ್ಷಣ ಇಲಾಖೆಯ ಬಿಆರ್‍ಪಿ ಎಂಎಸ್. ಮಲ್ಲಿಕಾರ್ಜುನಪ್ಪ, ಆರೋಗ್ಯ ನಿರೀಕ್ಷಕರಾದ ಮಂಜು, ಕ್ಷೇತ್ರ ಶಿಕ್ಷಣ ಆರೋಗ್ಯಾಧಿಕಾರಿಗಳಾದ ಲೀಲಾವತಿ, ಆರೋಗ್ಯ ಸಹಾಯಕರಾದ ನಾಗರಾಜು, ನವೀನ್ ಕುಮಾರ್ ಹಾಗೂ ಇತರರು ಹಾಜರಿದ್ದರು.
ಸಭೆಯ ನಂತರ ತಾಲೂಕು ಮಟ್ಟದ ತನಿಖಾ ದಳದಿಂದ ನಗರದ ಕೆ ಎಸ್ ಆರ್ ಟಿಸಿ ಮುಖ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ಸಂತೆಮರಹಳ್ಳಿ ವೃತ್ತಗಳಲ್ಲಿನ ಹೋಟೆಲ್, ಬೇಕರಿ, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ವಿಶ್ವ ತಂಬಾಕು ರಹಿತ ದಿನದ ಕುರಿತು ಅರಿವು ಮೂಡಿಸಲಾಯಿತು. //// ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –  Chamarajanagar News Online – Karnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!