ಹನೂರು-ಕಣ್ಣೂರಿನ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Kannada News (itskannada) ಕೊಳ್ಳೇಗಾಲ:ಹನೂರು-ಕಣ್ಣೂರಿನ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಪರಿಸರ ಕಾಳಜಿ ಹೊಂದದ ಮಾನವನಿಂದಾಗಿ ಜಾಗತಿಕ ತಾಪಮಾನ ಉಂಟಾಗಲು ಕಾರಣ ಎಂದು ಮುಖ್ಯಶಿಕ್ಷಕಿ ಗೀತಾರವರು ತಿಳಿಸಿದರು.
ಹನೂರು ಸಮೀಪದ ಕಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಅಳಿವು ಉಳಿವು ನಿರ್ಧಾರವಾಗುವುದು ನಮ್ಮ ಸುತ್ತಮುತ್ತಲಿನ ಹೇಗಿದೆ ಎಂಬುದರ ಮೇಲೆ. ಶಾಲೆಯಿಂದ ಜಾಥಾ ಹೊರಟ ಮಕ್ಕಳು ಮತ್ತು ಶಿಕ್ಷಕರು ಮುಖ್ಯರಸ್ತೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಘೋಷಣೆ ಕೂಗುತ್ತಾ ಸಾಗಿದರು.

ಶಾಲಾ ಮಕ್ಕಳಿಗೆ ಸಸಿಗಳನ್ನು ನೀಡಿ ಮಕ್ಕಳು ಗಿಡಗಳನ್ನು ಪೋಷಿಸಿ ಸಂರಕ್ಷಿಸುವ ಅಭ್ಯಾಸ ಬೆಳೆಸುವಂತೆ ಸಲಹೆ ನೀಡಿದರು. ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರೂ ಶ್ರಮಿಸಬೇಕೆಂದರು.
ನಂತರ ಮಾತನಾಡಿದ ಶಿಕ್ಷಕ ಸಾವುಕರಾಜು ಪ್ರತಿ ಮಕ್ಕಳು ತಮ್ಮ ಮನೆಗಳಲ್ಲಿ ವಿವಿಧ ಜಾತಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದಾಗ ಮಾತ್ರ ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೆ ಒದಗಿಸಬಹುದು. ಮಕ್ಕಳು ಪರಿಸರ ಕಾಳಜಿ ಹೊಂದಿದಾಗ ಮಾತ್ರವೇ ಉತ್ತಮ ಪರಿಸರವನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವಕುಮಾರ್, ಸುರೇಶ್‍ಕುಮಾರ್, ಮರಿಯಮ್ಮ, ಲತಾ, ಸುಮಿತ್ರವಲ್ಲಿ ಮತ್ತು ಮಹಾದೇವಿ ಹಾಜರಿದ್ದರು.