ಶುದ್ದ ನೀರು,ಗಾಳಿ,ಆರೋಗ್ಯಕ್ಕೆ ಗಿಡ ನೆಡಿ : ಶಾಸಕ ಸಿ.ಎಸ್.ನಿರಂಜನಕುಮಾರ್

Kannada News (itskannada) ಚಾಮರಾಜನಗರ- ಗುಂಡ್ಲುಪೇಟೆ: ಶುದ್ದ ನೀರು,ಗಾಳಿ,ಆರೋಗ್ಯಕ್ಕೆ ಗಿಡ ನೆಡಿ : ಶಾಸಕ ಸಿ.ಎಸ್.ನಿರಂಜನಕುಮಾರ್ : ಮಾನವನ ಅಗತ್ಯಕ್ಕೆ ಬೇಕಾದ ಶುದ್ದ ನೀರು, ಗಾಳಿ ಸೇರಿದಂತೆ ಎಲ್ಲವೂ ಪರಿಸರದಿಂದಲೇ ದೊರಕಬೇಕಾಗಿದ್ದು ಎಲ್ಲರೂ ತಮ್ಮ ಮನೆಗಳ ಬಳಿ ಕನಿಷ್ಟ ಎರಡು ಸಸಿಗಳನ್ನು ನೆಟ್ಟು ಬೆಳೆಸಿದಾಗ ಮಾತ್ರ ಉತ್ತಮ ಪರಿಸರ ನಿರ್ಮಾಣವಾಗಲಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಶುದ್ದ ನೀರು,ಗಾಳಿ,ಆರೋಗ್ಯಕ್ಕೆ ಗಿಡ ನೆಡಿ : ಶಾಸಕ ಸಿ.ಎಸ್.ನಿರಂಜನಕುಮಾರ್

ಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಯಿಂದ ಮಾತ್ರ ಮುಂದಿನ ಜನಾಂಗದ ಉಳಿವು ಸಾಧ್ಯವಾಗಲಿದೆ ಎಂದರು.
ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹುಲಿಗಳ ಸಂತತಿ ಹೆಚ್ಚುವ ಮೂಲಕ ಬಂಡೀಪುರವು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಕಾಡಂಚಿನ ಸುತ್ತಲಿನ ಗ್ರಾಮಸ್ಥರ ನೆರವು ಕಾರಣವಾಗಿದೆ. ವನ್ಯಜೀವಿಗಳಿದ್ದರೆ ಅರಣ್ಯ, ಅರಣ್ಯವಿದ್ದರೆ ಜಲ, ಆದ್ದರಿಂದ ಎಲ್ಲರೂ ಪರಿಸರದ ಬಗ್ಗೆ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಾಪಂ ಅಧ್ಯಕ್ಷ ಜಗದೀಶ ಮೂರ್ತಿ, ಎಸಿಎಫ್ ನಟರಾಜು, ಆರ್ ಎಫ್ ಓಗಳಾದ ನವೀನ್ ಕುಮಾರ್, ಶೈಲೇಂದ್ರ, ವನ್ಯಜೀವಿ ಪರಿಪಾಲಕ ಚೋಳರಾಜು ಸೇರಿದಂತೆ ಹಲವರು ಇದ್ದರು.
ಇದೇ ಸಂದರ್ಭದಲ್ಲಿ ರೈತರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು.//// Chamarajanagar News Online