ಮಕ್ಕಳ ದೈಹಿಕ ಬೆಳವಣಿಗೆಗೆ ಹಾಲು ಸಹಕಾರಿ-ಎ.ಸಿ.ರಾಜಶೇಖರ್

Milk is a cooperative for children's physical development

0 163

Kannada News (itskannada) ಚಾಮರಾಜನಗರ : ಮಕ್ಕಳ ದೈಹಿಕ ಬೆಳವಣಿಗೆಗೆ ಹಾಲು ಸಹಕಾರಿ-ಎ.ಸಿ.ರಾಜಶೇಖರ್  : ಮಕ್ಕಳ ದೈಹಿಕ ಬೆಳವಣಿಗೆಗೆ ಹಾಲು ಸಹಕಾರಿಯಾಗಲಿದೆ ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎ.ಸಿ.ರಾಜಶೇಖರ್ ತಿಳಿಸಿದರು. ತಾಲ್ಲೂಕಿನ ಆಲೂರು ಗ್ರಾಮದ ಹಾಲುಉತ್ಪಾದಕರ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು.

ಹಾಲು ಪೌಷ್ಟಿಕ ಆಹಾರಗಳಲ್ಲಿ ಒಂದು ಇದರಿಂದ ಮಕ್ಕಳಿಂದ ಹಿಡಿದು ದೊಡ್ಡವರೆಗೂ ಪ್ರತಿ ದಿನ ಒಂದು ಲೋಟ ಹಾಲು ಕುಡಿಯುವದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದ ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಿರ ಬಹುದು ಎಂದ ಅವರು, ಇನ್ನು ಮಕ್ಕಳಿಗೆ ಹಾಲು ಕುಡಿಸುವುದರಿಂದ ಅವರ ಬುದ್ದಿ ಶಕ್ತಿ ಸಹ ಚುರುಕಾಗಿರುವತ್ತದೆ ಎಂದು ಸಲಹೆ ನೀಡಿದರು.

ರೈತರು ವ್ಯವಸಾಯದ ಜೊತೆ ಹೈನುಗಾರಿಯಲ್ಲಿ ತೊಡಗಿಕೊಂಡಾಗ ಆರ್ಥಿಕವಾಗಿ ಮುಂದೆ ಬರಬಹುದು ಎಂದು ಕಿವಿ ಮಾತು ಹೇಳಿದ ಅವರು, ಹಾಲುಉತ್ಪಾದಕರು ಹಾಲಿ ಡೈರಿಗೆ ಗುಣಮಟ್ಟದ ಹಾಲು ಪೂರೈಸಿದಾಗ ಮಾತ್ರ ಡೈರಿ ಮತ್ತು ಹಾಲು ಉತ್ಪಾದಕರು ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹದೇವಸ್ವಾಮಿ, ನಿರ್ದೇಶಕರಾದ ಎಸ್.ಮಹದೇವಯ್ಯ, ಎ.ಬಿ.ಬಸವಣ್ಣ, ನಾಗರಾಜ್, ಪುಟ್ಟಸ್ವಾಮಿ, ಎ.ಎಂ.ಬಸವಣ್ಣ, ಆರ್.ಶಿವಣ್ಣ, ಚಿನ್ನಮ್ಮ, ಭಾಗ್ಯಮ್ಮ, ಎ.ಆರ್.ಚಂದ್ರು, ಕಾರ್ಯದರ್ಶಿ ನಂಜುಂಡಸ್ವಾಮಿ, ಮುಖಂಡರಾದ ಸುಬ್ಬಣ್ಣ, ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು, ಹಾಲು ಉತ್ಪಾದಕರು ಹಾಜರಿದ್ದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Chamarajanagar News Online –Karnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!