ಮರಿತಿಬ್ಬೇಗೌಡ ರ ಪರ ಜೆಡಿಎಸ್ ಮುಖಂಡರ ಮತಯಾಚನೆ 

0 65

Kannada News (itskannada) Chamarajanagar : ಮರಿತಿಬ್ಬೇಗೌಡ ರ ಪರ ಜೆಡಿಎಸ್ ಮುಖಂಡರ ಮತಯಾಚನೆ –  ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ  ಜೂ. 8 ರಂದು ನಡೆಯುತ್ತಿರುವ  ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ  ಉಪ ಸಭಾಪತಿ ಮರಿತಿಬ್ಬೇಗೌಡರ ಪರವಾಗಿ  ಜೆಡಿಎಸ್ ಮುಖಂಡರು ನಗರದ ವಿವಿಧ  ಶಾಲಾ, ಕಾಲೇಜುಗಳಿಗೆ ತೆರಳಿ ಮತಯಾಚನೆ ಮಾಡಿದರು.

ಮರಿತಿಬ್ಬೇಗೌಡ ರ ಪರ ಜೆಡಿಎಸ್ ಮುಖಂಡರ ಮತಯಾಚನೆ

ನಗರದ ಸರ್ಕಾರಿ ಮಹಿಳೆಯರ ಪದವಿ ಪೂರ್ವ ಕಾಲೇಜಿಗೆ ತೆರೆಳಿದ ಜೆಡಿಎಸ್ ಮುಖಂಡ ಕಂಚುಗಹಳ್ಳಿ ಷಡಕ್ಷರಿ ಅವರು,  ಶಿಕ್ಷಕರನ್ನು ಭೇಟಿ ಮಾಡಿ, ಕರ ಪತ್ರ ಹಾಗೂ ಸಾಧನೆ ಕಿರುಹೊತ್ತಿಗೆಗಳನ್ನು ನೀಡಿ, ಮಾತನಾಡಿ  ಕಳೆದ 18 ವರ್ಷಗಳಿಂದ ಸತತವಾಗಿ ಆಯ್ಕೆಯಾಗುತ್ತಾ ತಮ್ಮೆಲ್ಲರ ಸೇವೆಯನ್ನು ಮಾಡುತ್ತಾ  ಬಂದಿರುವ  ಮರಿತಿಬ್ಬೇಗೌಡರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡುವ ಮೂಲಕ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರ ಕಲ್ಯಾಣಕ್ಕಾಗಿ ಹೆಚ್ಚು ಶ್ರಮಿಸುವಂತೆ ಮಾಡಬೇಕು ಎಂದು ಮನವಿಮಾಡಿದರು.

ಮರಿತಿಬ್ಬೇಗೌಡ ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳರಾಗಿದ್ದು,  ಕಳೆದ 18 ವರ್ಷಗಳಿಮದ ಶಿಕ್ಷಕರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡು ಶಿಕ್ಷಣ ಕ್ಷೇತ್ರದ  ಬೆಳವಣಿಗೆ ಅವಿರತವಾಗಿ ದುಡಿಯುತ್ತಿದ್ದಾರೆ.  ಸದನದ ಒಳಗೆ ಹಾಗೂ ಹೊರೆಗೆ  ಶಿಕ್ಷಕರ ಸಮಸ್ಯೆಗಳಿಗೆ ಹೋರಾಟ ಮಾಡುವ ಜೊತೆಗೆ ನಿರಂತರವಾಗಿ ಶಿಕ್ಷಕರ ಸಂಪರ್ಕವನ್ನು ಹೊಂದಿ ಶಿಕ್ಷಣ ಕ್ಷೇತ್ರದ ಅಭಿವೃದ್ದಿಯಲ್ಲಿ ತಮ್ಮದೇ ಆದ ಕೊಡುಗೆ  ದೇಶದ ಅಭಿವೃದ್ದಿಗೆ ತಮ್ಮದೇ ಕೊಡುಗೆ ನೀಡಿರುವ ಮರಿತಿಬ್ಬೇಗೌಡರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿರುವ  ಈ ಸಂದರ್ಭದಲ್ಲಿ ಇನ್ನು ಹೆಚ್ಚಿನ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ  ನೈತಿಕ ಬಲವನ್ನು  ನೀಡಲು  ಶಿಕ್ಷಕ ಬಂಧುಗಳು  ಮರಿತಿಬ್ಬೇಗೌಡರಿಗೆ  ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಬೇಕು ಎಂದು ಮನವಿ  ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ನಿರಂಜನಕುಮಾರ್, ಮಲ್ಲೇಶ್ ಉಕ್ಕಲಗೆರೆ,  ಎಪಿಎಂಸಿ ನಿರ್ದೇಶಕ ಸಾಲೂರು ಸೋಮಣ್ಣ, ಹೂವಳ್ಳಿ ನಟರಾಜು, ಸತೀಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ,  ಗೋವಿಂದರಾಜು ಹಾಗು ಶಿಕ್ಷಕರು ಇದ್ದರು. ///  Chamarajanagar News Online

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!