ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಜಾಗೃತಿ

Health awareness from District Health and Family Welfare Department

Chamarajanagar (itskannada) ಚಾಮರಾಜನಗರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಜಾಗೃತಿ : ಅತಿಸಾರ ಭೇದಿಯಿಂದ ಮಕ್ಕಳು ನಿತ್ರಾಣಗೊಂಡು ಸಾಯುವ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ತಡೆಯಲು ಹಾಗೂ ಜನರಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಲು ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ.ಹೆಚ್.ಪ್ರಸಾದ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಜಾಗೃತಿ

ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರ ಅವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸೋಮವಾರ ನಡೆದ 5 ವರ್ಷದ ಮಕ್ಕಳಿಗೆ ಓಆರ್‍ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ನೀಡುವ ಮೂಲಕ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 5 ವರ್ಷದೊಳಗಿನ  ಮಕ್ಕಳ ಸಾವಿನ ಪ್ರಮಾಣವನ್ನು ಅವಲೋಕಿಸಿದಾಗ ಶೇಕಡ 8 ರಷ್ಟು ಮಕ್ಕಳು ಅತಿಸಾರ ಭೇದಿಯಿಂದ ಸಾವನ್ನುಪ್ಪುತಿದ್ದಾರೆ ಎಂಬ ವರದಿಗಳು ಧೃಢಿಪಡಿಸುತ್ತಿವೆ. ಇದನ್ನು ಅತಿಸಾರ ಭೇದಿಯಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ತೀವ್ರತರ ಅತಿಸಾರಭೇದಿ ನಿಯಂತ್ರಣ ಪಾಕ್ಷೀಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮೇ 28 ರಿಂದ ಜೂನ್ 9 ರವರೆಗೆ ಎಲ್ಲಾ ಪ್ರಾಥಮಿಕ ಕೇಂದ್ರಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ ಎಂದರು.

ನಾಗರೀಕರಿಗೆ ಆರೋಗ್ಯದ ಕಾಳಜಿ ಬಗ್ಗೆ ಶಿಕ್ಷಣ

ಈ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ 5 ವರ್ಷದೊಳಗಿನ ಎಲ್ಲಾ ಮಕ್ಕಳ ಸಮೀಕ್ಷೆ ನಡೆಸಿ, ಮಕ್ಕಳಿರುವ ಮನೆಗಳಿಗೆ ಅತಿಸಾರ ಭೇದಿ ತಡೆಗಟ್ಟಲು ಓ.ಆರ್.ಎಸ್ ಪ್ಯಾಕೇಟ್ ವಿತರಿಸಲಾಗುತ್ತದೆ ಹಾಗೂ ಅತಿಸಾರ ಭೇದಿಯಾದ ಮಕ್ಕಳಿಗೆ ಜಿಂಕ್ ಮಾತ್ರೆ ನೀಡಲಾಗುತ್ತದೆ ಹಾಗೂ ಮನೆಯಲ್ಲಿ ಓ.ಆರ್.ಎಸ್ ತಯಾರಿಸುವ ವಿಧಾನದ ಬಗ್ಗೆ ಹಾಗೂ ಕೈಗಳನ್ನು ಸ್ವಚ್ಚಗೊಳಿಸುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ ಎಂದು ಪ್ರಸಾದ್ ತಿಳಿಸಿದರು.

ಚಾಮರಾಜನಗರ ತಾಲ್ಲೂಕಿನಲ್ಲಿ 24724 ಮಕ್ಕಳು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 15470 ಮಕ್ಕಳು, ಕೊಳ್ಳೇಗಾಲ ತಾಲ್ಲೂಕಿನಲ್ಲಿ 29478 ಮಕ್ಕಳು ಹಾಗೂ ಯಳಂದೂರು ತಾಲ್ಲೂಕಿನಲ್ಲಿ 5980 ಮಕ್ಕಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 75652 ಮಕ್ಕಳನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ. ಎಲ್ಲಾ ಮಕ್ಕಳಿಗೆ ಅಭಿಯಾನದಲ್ಲಿ ಓಆರ್‍ಎಸ್ ಪ್ಯಾಕೇಟ್ ಹಾಗೂ ಜಿಂಕ್ ಮಾತ್ರೆಗಳನ್ನು ನೀಡಿಲಾಗುತ್ತದೆ. ಪೋಷಕರು ಸಹ ತಮ್ಮ ಮನೆ, ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್‍ಸಿಎಚ್ ಅಧಿಕಾರಿ ಡಾ ಕೆ.ಎಂ. ವಿಶ್ವೇಶ್ವರಯ್ಯ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ನಗರ ಆರೋಗ್ಯ ಕೇಂದ್ರ ವೈದಾಧಿಕಾರಿ ಡಾ. ಮಮತ ಕುಮಾರಿ, ಪ್ರಭಾರ ಇಓ ನಾರಾಯಣಸ್ವಾಮಿ, ಸುರೇಶ್ ಆಚಾರ್, ಮಹದೇವ್, ದುಶ್ಯಂತ್, ಮಂಜು, ಐ.ಎಫ್.ವಿ. ಮಾಲತಿ, ಮಂಜು. ಎಸ್ ಆರ್.ಬಿ.ಎಸ್.ಕೆ ತಂಡ ಮತ್ತು ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. /// ಈ ವಿಭಾದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ –  Chamarajanagar News Online – Kannada News