ಸೋಮವಾರಪೇಟೆ ಶಾಲೆಯಲ್ಲಿ ವಿನೂತವಾದ ಕಾರ್ಯಕ್ರಮ

Chamarajanagar (itskannada) ಚಾಮರಾಜನಗರ : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭದ ಮೊದಲ ದಿನವಾದ ಮಂಗಳವಾರ ಶಾಲೆಗೆ ಆಗಮಿಸಿದ ಮಕ್ಕಳಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಸೋಮವಾರಪೇಟೆ ಶಾಲೆಯಲ್ಲಿ ವಿನೂತವಾದ ಕಾರ್ಯಕ್ರಮವನ್ನು ಎಸ್‍ಡಿಎಂಸಿವತಿಯಿಂದ ನಡೆಸಲಾಯಿತು.

ಸೋಮವಾರಪೇಟೆ ಶಾಲೆಯಲ್ಲಿ ವಿನೂತವಾದ ಕಾರ್ಯಕ್ರಮ

ಗರದ ಸಮೀಪದ ಸೋಮವಾರಪೇಟೆ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ರಾಜಮ್ಮ ವೃಷಬೇಂದ್ರಪ್ಪ ಅವರು ಮಕ್ಕಳಿಗೆ ರಾಷ್ಟ್ರನಾಯಕ ಪುÀಸ್ತಕ, ಅಡಿಕೆ ಸಾಮಗ್ರಿಗಳನ್ನು ನೀಡಿ ಸ್ವಾಗತಿಸಿದರು.
ಶಾಲೆ ಸಮಿತಿಯಿಂದ ನಡೆದ ಈ ಕಾರ್ಯಕ್ರಮಕ್ಕೂ ಮುನ್ನಾ ಮಕ್ಕಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು. ಶಾಲೆಯನ್ನು ತಳಿರು ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು.

ಈ ಸಂದರ್ಭದಲ್ಲಿ ಮಕ್ಕಳಿಗೆ ಯುವ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಲ್. ಸುರೇಶ್ ರಾಷ್ಟ್ರನಾಯಕರಾದ ಮಹಾತ್ಮಾಗಾಂಧಿ, ಅಂಬೇಡ್ಕರ್, ಭಗತ್‍ಸಿಂಗ್, ಸ್ವಾಮಿ ವಿವೇಕಾನಂದ, ಬಾಲಗಂಗಾಧರ್ ತಿಲಕ್, ಬಸವಣ್ಣ ಇತರ ಮಹಾನ್ ನಾಯಕರ ಪುಸ್ತಕಗಳನ್ನು ವಿತರಣೆ ಮಾಡಿ, ಪ್ರತಿಜ್ಞೆ ವಿಧಿಯನ್ನು ಭೋದಿಸಿದರು.

8ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಮೂವರು ವಿದ್ಯಾರ್ಥಿಗಳಾದ ಸುಮತಿ, ಸೌಮ್ಯ, ಮಾದಲಾಂಬಿಕೆ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನಗರಸಭೆ ಸದಸ್ಯೆ ರಾಜಮ್ಮ ವೃಷಬೇಂದ್ರ ಅವರು ವಿತರಣೆ ಮಾಡಿ ಮಾತನಾಡಿ, ಮಕ್ಕಳು ಶಾಲೆಗೆ ತಪ್ಪದೇ ಹಾಜರಾಗುವ ಮೂಲಕ ಉತ್ತಮವಾಗಿ ವ್ಯಾಸಂಗ ಮಾಡಿ, ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು. ಸರ್ಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ದೊರೆಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು. ವಿದ್ಯೆ ಕಲಿತರೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ರಾಚಯ್ಯ, ಭಾರತೀಯ ಯುವ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಲ್. ಸುರೇಶ್, ಮುಖ್ಯ ಶಿಕ್ಷಕಿ ಶಾಂತಲಕ್ಷ್ಮಿ, ಸಹ ಶಿಕ್ಷಕರಾದ ಸುಂದ್ರಮ್ಮ, ಇಂದಿರಾಗಾಂಧಿ, ಮಹದೇವಮ್ಮ, ಲಿಂಗಮ್ಮಣ್ಣಿ, ಉಮಾಮಹೇಶ್ವರಿ, ಕುಮಾರಸ್ವಾಮಿ, ಸುಧಾ, ಜೆಮ್ಸ್ ಸುನಿಲ್, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  /// Chamarajanagar News Online