ಶಿಕ್ಷಕರ ಸಮಸ್ಯೆ ನಿವಾರಣೆಗೆ ಜೆಡಿಎಸ್ ಬೆಂಬಲಿಸಿ-ಜೆಡಿಎಸ್ ಅಧ್ಯಕ್ಷ ಕಾಮರಾಜು

Chamarajanagar (itskannada) ಚಾಮರಾಜನಗರ:ದಕ್ಷಿಣ ಶಿಕ್ಷಕರ ಕ್ಷೇತ್ರದ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಅವರ ಪರವಾಗಿ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಲು ಮರಿತಬ್ಬೇಗೌಡ ಅವರು ಉತ್ಸುಕರಾಗಿದ್ದಾರೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಾಮರಾಜು ತಿಳಿಸಿದರು.

ಶಿಕ್ಷಕರ ಸಮಸ್ಯೆ ನಿವಾರಣೆಗೆ ಜೆಡಿಎಸ್ ಬೆಂಬಲಿಸಿ-ಜೆಡಿಎಸ್ ಅಧ್ಯಕ್ಷ ಕಾಮರಾಜು

ವರು ನಗರದ ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ಪರವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜೆಡಿಎಸ್ ಪಕ್ಷದ ವರಿಷ್ಠರ ಆದೇಶದಂತೆ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕಾದ ಪ್ರಮುಖ ಕರ್ತವ್ಯ ಕಾರ್ಯಕರ್ತರದ್ದಾಗಿದೆ. ಹೀಗಾಗಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಅವರನ್ನು ಗೆಲ್ಲಿಸಬೇಕೆಂದು ತಿಳಿಸಿದರು.
ಮರಿತಿಬ್ಬೇಗೌಡ ಅವರು ಈ ಹಿಂದೆಯು ಸಹ ಗೆದಿದ್ದು ಶಿಕ್ಷಕರ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದೂ ಮುಂದೆಯೂ ಸಹ ಶಿಕ್ಷಕರ ಅಶೋತ್ತರಗಳಿಗೆ, ಬೇಡಿಕೆಗಳಿಗೆ ಹೋರಾಡಲಿದ್ದು ಶಿಕ್ಷಕ ಕ್ಷೇತ್ರದ ಮತದಾರರು ಹೆಚ್ಚಿನ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇಂದು ರಾಜ್ಯದಲ್ಲಿ ಜಾತ್ಯತೀತ ನೆಲಗಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದು ನಮ್ಮ ನಾಯಕ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಸುಭದ್ರ ಸರ್ಕಾರ ನೀಡಲಿದ್ದು ಉತ್ತಮ ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಿ,ಎನ್ ಉಷಾ, ಮಹಾ ಪ್ರಧಾನ ಕಾರ್ಯದರ್ಶಿ ಇಪ್ತಿಯಾಜ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪುರಖಾನ್, ಕ್ರೈಸ್ತ ಘಟಕದ ಜಿಲ್ಲಾಧ್ಯಕ್ಷೆ ಜೂಲಿಯಂವಿಲಿಯ, ಜಿಲ್ಲಾ ಎಸ್,ಟಿ ಘಟಕದ ಅಧ್ಯಕ್ಷ ನಾಗೇಶ್‍ನಾಯ್ಕ, ತಾಲ್ಲೂಕು ಅಧ್ಯಕ್ಷ ರಾಮಚಂದ್ರು, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಸೈಯದ್ ಇದ್ರೀಶ್, ಟೌನ್ ಅಧ್ಯಕ್ಷ ಜಿ.ಎಂ.ಶಂಕರ್, ಸೇವಾದಳದ ಜಿಲ್ಲಾಧ್ಯಕ್ಷ ನಹೀಮ್, ಟೌನ್ ಘಟಕದ ಅಧ್ಯಕ್ಷ ಚಿಕ್ಕ ಅಂಕಶೆಟ್ಟಿ,್ಟ ಜಿಲ್ಲಾ ಉಪಾಧ್ಯಕ್ಷ ಮಹೇಶ್‍ಗೌಡ, ಶ್ರೀನಿವಾಸ್ ಕೊಳ್ಳೇಗಾಲ ತಾ.ಅಧ್ಯಕ್ಷ ಶಶಿಕುಮಾರ್, ಯಳಂದೂರು ತಾ,ಅಧ್ಯಕ್ಷ ಶಾಂತರಾಜು, ಬಸವನಪುರ ಮಂಜು ರೈತ ಘಟಕದ ಜಿಲ್ಲಾಧ್ಯಕ್ಷ ಬಾಬು, ಹರಳಪ್ಪ, ಅರುಣ್‍ಕುಮಾರ್, ಬಸವಣ್ಣ, ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ರವಿಚಂದ್ರ, ಸತ್ಯಕುಮಾರ್ ಪಕ್ಷದ ಕಾರ್ಯಕರ್ತರು, ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿದ್ದರು.  ////  Chamarajanagar News Online