ಚಾಮರಾಜನಗರ | ಕೃಷಿ ಬ್ಯಾಂಕಿನಲ್ಲಿ ಕಾರ್ಯದರ್ಶಿ ಚಾಮರಾಜುರವರಿಗೆ ಬೀಳ್ಕೊಡುಗೆ

0 63

Kannada News (itskannada)  ಚಾಮರಾಜನಗರ | ಕೃಷಿ ಬ್ಯಾಂಕಿನಲ್ಲಿ ಕಾರ್ಯದರ್ಶಿ ಚಾಮರಾಜುರವರಿಗೆ ಬೀಳ್ಕೊಡುಗೆ : ತಾಲ್ಲೂಕಿನ ನಾಗವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಚಾಮರಾಜುರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಾಗವಳ್ಳಿ ಗ್ರಾಮದ ಕೃಷಿಪತ್ತಿನ ಬ್ಯಾಂಕಿನಲ್ಲಿ ಸತತ 40 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚಾಮರಾಜು ವಯೋನಿಮಿತ್ತ ನಿವೃತ್ತಿಯಾದ ಹಿನ್ನೆಲೆಯಲ್ಲಿ ಬ್ಯಾಂಕಿನ ನಿರ್ದೇಶಕರು, ಅಧಿಕಾರಿಗಳು ಹಾಗೂ ರೈತರು ಹಾರ ಶಾಲು ಹೊದಿಸಿ ಹೃದಯಸ್ಪರ್ಶಿ ಬೀಳ್ಕೊಟ್ಟರು.

ಚಾಮರಾಜನಗರ | ಕೃಷಿ ಬ್ಯಾಂಕಿನಲ್ಲಿ ಕಾರ್ಯದರ್ಶಿ ಚಾಮರಾಜುರವರಿಗೆ ಬೀಳ್ಕೊಡುಗೆ

ಳಿಕ ಮಾತನಾಡಿದ ಚಾಮರಾಜು, ಸತತ 40 ವರ್ಷಗಳಿಂದಲೂ ನಾನು ಈ ಕೃಷಿ ಪತ್ತಿನ ಬ್ಯಾಂಕಿನಲ್ಲಿ ರೈತರು ಸೇರಿದಂತೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಅವರಿಗೆ ಬೆಳೆ ಸಾಲಗಳು, ಯಶಸ್ವಿನಿ ಆರೋಗ್ಯ ಕಾರ್ಡ್‍ಗಳ ವಿತರಣೆ ಸೇರಿದಂತೆ ವಿವಿಧ ಸಾಲಗಳನ್ನು ನಿಗಧಿತ ಸಮಯಕ್ಕೆ ನೀಡಲಾಗುತ್ತಿತ್ತು. ಅದರಂತೆ ಸಾಲವನ್ನು ಮರುಪಾವತಿ ಮಾಡುತ್ತಿದ್ದರೆಂದು ಪ್ರಶಂಸೆಪಟ್ಟ ಇವರು, ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲದೇ ಕಾರ್ಯನಿರ್ವಹಿಸಿದ್ದೇನೆ ಎಂದರು. ಅದರಂತೆ ಈ ವ್ಯಾಪ್ತಿಯ ಜನರು ಸಹಾ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟು ನನ್ನೊಂದಿಗೆ ಸಹಕರಿಸುತ್ತಿದ್ದರೆಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷ ಸೋಮೇಶ್ವರ್ ಮಾತನಾಡಿ, ಸುದೀರ್ಘ ಸೇವೆ ಮಾಡಿ ನಿವೃತ್ತರಾಗುತ್ತಿರುವ ಚಾಮರಾಜು ಅವರು ನಮ್ಮ ಬ್ಯಾಂಕಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಈ ದಿನ ನಿವೃತ್ತರಾಗುತ್ತಿದ್ದಾರೆ ಇವರ ಮುಂದಿನ ಜೀವನ ಸುಖಕರವಾಗಿರಲಿ ಇವರ ಸೇವೆಯಿಂದ ನಮ್ಮ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಹೆಚ್ಚು ಅನುಕೂಲಕರವಾಗಿದೆ. ಇವರ ಈ ಸೇವೆಯಲ್ಲಿ ಈವರೆವಿಗೆ ಯಾವುದೇ ಕಪ್ಪುಚುಕ್ಕಿ ಇಲ್ಲದೇ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ ಸೋಮೇಶ್ವರ್, ಮುಂದಿನ ದಿನಗಳಲ್ಲಿ ಬರುವ ಕಾರ್ಯದರ್ಶಿಗಳು ಇವರಂತೆ ಇನ್ನೂ ಹೆಚ್ಚಿನ ಸೇವೆ ನೀಡಿ ಈ ಭಾಗದ ಜನತೆಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಶಿವಶಂಕರ್, ವ್ಯವಸ್ಥಾಪಕ ವೆಂಕಟಾಛಲ, ವಲಯ ಅಧಿಕಾರಿಗಳಾದ ವೆಂಕಟೇಶ್, ಲಿಂಗರಾಜ್, ಪಿಎಸಿಸಿ ಉಪಾಧ್ಯಕ್ಷ ಚಿಕ್ಕಮಹದೇವ್, ನಿದೇರ್ಶಕರಾದ ಜಾನ್, ಮಹದೇವ್, ಪುಟ್ಟತಾಯಮ್ಮ, ಮುಷ್ಟಾಕ್, ಮಲ್ಲಣ್ಣ, ಆರ್.ಕೃಷ್ಣ, ಮಾಜಿ ಅಧ್ಯಕ್ಷ ನಲ್ಲೂರು ಬಸವಣ್ಣ, ಶ್ರೀಕಂಠಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗೌಡಿಕೆ ಪುಟ್ಟಸ್ವಾಮಿ, ನಂಜುಂಡಸ್ವಾಮಿ, ಹೆಬ್ಬಸೂರು ಪಿಎಸಿಸಿ ಕಾರ್ಯದರ್ಶಿ ಮಹೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.  /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –ChamarajanagarChamarajanagar News Online – Karnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!