ನಟಿಯ ಹಸ್ತಮೈಥುನ ದೃಶ್ಯ ಪಾಕಿಸ್ತಾನದಲ್ಲಿ ನಿಷೇಧ, ಅರಬ್ ನಲ್ಲಿ ಸೀನ್ ಕಟ್

0 707

Kannada News (itskannada) Bollywood : ನಟಿಯ ಹಸ್ತಮೈಥುನ ದೃಶ್ಯ ಪಾಕಿಸ್ತಾನದಲ್ಲಿ ನಿಷೇಧ, ಅರಬ್ ನಲ್ಲಿ ಸೀನ್ ಕಟ್ : ಮುಂಬೈ : ಸೋನಂ ಕಪೂರ್, ಕರೀನಾ ಕಪೂರ್ ಖಾನ್, ಸ್ವರಾ ಭಾಸ್ಕರ್ ಮತ್ತು ಶಿಖಾ ತಲ್ಸಾನಿಯಾ ನಟಿಸಿದ ವೀರ್ ದೆ ವೆಡ್ಡಿಂಗ್ ಟ್ರೇಲರ್ ಮೇ 25 ರಂದು ಬಿಡುಗಡೆಯಾಯಿತು ಮತ್ತು ಪ್ರತಿಯೊಬ್ಬರೂ ಅದರ ಬಗೆಗೆ ಪಿಸುಗುಡಲು ಪ್ರಾರಂಭಿಸಿದರು..

ನಟಿ ಪ್ರಧಾನ ಹಾಸ್ಯ ಚಿತ್ರವಾಗಿರುವ ವೀರ್ ದೇ ವೆಡ್ಡಿಂಗ್ ನ ಒಂದು ದೃಶ್ಯ ಪರವಿರೋಧ ಚರ್ಚೆಗೀಡು ಮಾಡಿದೆ.
ಜೂ. 1 ರಂದು ಬಿಡುಗಡೆಯಾದ ವೀರ್ ದೇ ವೆಡ್ಡಿಂಗ್ ಚಿತ್ರದಲ್ಲಿ  ಕರೀನಾ ಕಪೂರ್, ಸೋನಂ ಕಪೂರ್, ಸ್ವರ ಭಾಸ್ಕರ್ ಸೇರಿದಂತೆ ಪ್ರಮುಖ ತಾರಾಮಣಿಗಳೇ ಅಭಿನಯಿಸಿದ್ದಾರೆ. ಹಾಸ್ಯ ಪ್ರಧಾನ ಚಿತ್ರವಾಗಿರುವ ಕಾರಣ ಬಾಲಿವುಡ್ ನಲ್ಲೂ ಗುಲ್ಲೆಬ್ಬಿಸುತ್ತಿದೆ. ಚಿತ್ರದಲ್ಲಿ ಮುಖ್ಯಪಾತ್ರದಾರಿಯಾಗಿರುವ ಸ್ವರ ಭಾಸ್ಕರ್ ಏಕಾಂತದಲ್ಲಿ  ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯ  ಚಿತ್ರದಲ್ಲಿದ್ದು ಕೇಂದ್ರ ಸೆನ್ಸಾರ್ ಮಂಡಳಿ ಈ ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕದೆ ಎ ಪ್ರಮಾಣ ಪತ್ರ ನೀಡಿದೆ.
ನಟಿಯ ಹಸ್ತಮೈಥುನ ದೃಶ್ಯ ಪಾಕಿಸ್ತಾನದಲ್ಲಿ ನಿಷೇಧ, ಅರಬ್ ನಲ್ಲಿ ಸೀನ್ ಕಟ್-itskannada 1
ಹಸ್ತಮೈಥುನ ದೃಶ್ಯದ ಜೊತೆಗೆ ಹಲವು ಅಶ್ಲೀಲ ಮಾತುಗಳು ಹಾಗೂ ಕಾಮ ಪ್ರಚೋದಿಸುವ ದೃಶ್ಯಗಳಿರುವುದರಿಂದ ನೆರೆಯ ಪಾಕಿಸ್ತಾನ ಚಿತ್ರವನ್ನು ನಿಷೇಧಿಸಿದರೆ, ಅರಬ್ ರಾಷ್ಟ್ರಗಳು ಹಸ್ತಮೈಥುನ ಸೀನ್ ಗೆ ಕತ್ತರಿ ಹಾಕಿದೆ. ಬಾಲಿವುಡ್ ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ದೃಶ್ಯಕ್ಕೆ ಅನುಮತಿ ನೀಡಿರುವುದರಿಂದ ಕೆಲವು ಸಂಘಟನೆಗಳು ಬಹಿರಂಗವಾಗಿ ಪ್ರತಿಭಟಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ, ಚರ್ಚೆಗಳು ಬೇಕು ಬೇಡವೆನ್ನುವವರಿಗೆ ಸುದ್ದಿ ಸರಕಾಗಿದೆ. ವಿವಾದವು ಹಾಗೆ ತಣ್ಣಗಾಗುತ್ತದೆಯೋ ಅಥವಾ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ. ಆದರೆ ಚಿತ್ರರಸಿಕರಂತೂ ಸಿನಿಮಾ ಜೊತೆಗೆ ಟ್ರೋಲ್ ಗಳನ್ನು ಎಂಜಾಯ್ ಮಾಡುತ್ತಿರುವುದು ಸುಳ್ಳಲ್ಲ. /// Bollywood Film News Kannada

Webtitle  : ನಟಿಯ ಹಸ್ತಮೈಥುನ ದೃಶ್ಯ ಪಾಕಿಸ್ತಾನದಲ್ಲಿ ನಿಷೇಧ, ಅರಬ್ ನಲ್ಲಿ ಸೀನ್ ಕಟ್

Keyword : ವೀರ್ ದೆ ವೆಡ್ಡಿಂಗ್ , ವೀರ್ ದೆ ವೆಡ್ಡಿಂಗ್ ಹಿಂದಿ , ವೀರ್ ದೆ ವೆಡ್ಡಿಂಗ್ ಗಾಸಿಪ್ , ವೀರ್ ದೆ ವೆಡ್ಡಿಂಗ್ ನ್ಯೂಸ್ ವೀರ್ ದೆ ವೆಡ್ಡಿಂಗ್ news ಕನ್ನಡ , Veere Di Wedding kannada news , Veere Di Wedding gossip , Veere Di Wedding updates, Veere Di Wedding casting in kannada, Veere Di Wedding Hindi movie news

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!