ಚಿಕಿತ್ಸೆ ಪಡೆದು ಗುಣಮುಖರಾದ ಬಿಪಾಶ ಬಸು

Kannada News (itskannada) Bollywood ಮುಂಬೈ : ಚಿಕಿತ್ಸೆ ಪಡೆದು ಗುಣಮುಖರಾದ ಬಿಪಾಶ ಬಸು : ನಗರದ ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬಿಪಾಶಾ ಬಸು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಖ್ಯಾತ ಬಾಲಿವುಡ್ ನಟಿ ಬಿಪಾಶಾ ಬಸು, ತೀವ್ರ ಉಸಿರಾಟದ ಸಮಸ್ಯೆಯಿಂದ  ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿತ್ತು. ಉಸಿರಾಟದ ಸಮಸ್ಯೆಯಿಂದಾಗಿ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ಬಿಪಾಶಾ ಬಸು,  ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಏನು ಎಂಬುದರ ಬಗ್ಗೆ ಕುಟುಂಬ ಬಾಯಿಬಿಟ್ಟಿರಲಿಲ್ಲ. ಆದ್ರೆ, ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ನಿಂದಾಗಿ ಹುಷಾರು ತಪ್ಪಿರುವ ಬಗ್ಗೆ ಬಿಪಾಶಾ ಬಸು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಉಹಾ ಪೋಹಗಳಿಗೆ ಇಲ್ಲ ಸಲ್ಲದ ಗಾಸಿಪ್ ಗಳಿಗೆ ತೆರೆ ಬಿದ್ದಂತಾಗಿದೆ

ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ನಂತರ ನಟಿ ಬಿಪಾಶಾ ಬಸು ಇದೀಗ ಮನೆಗೆ ಹಿಂದಿರುಗಿದ್ದಾರೆ. ////  Bollywood Film News Kannada