ಪೋಲಿಸರಿಗೆ,24 ಪುಟಗಳ ಡೆತ್ ನೋಟ್ ಬೆರೆದು ವ್ಯಕ್ತಿ ನೇಣಿಗೆ ಶರಣು

Man writes 24-page letter to cops-kills self

34

Bangalore (itskannada) ಬೆಂಗಳೂರು : ಪೋಲಿಸರಿಗೆ,24 ಪುಟಗಳ ಡೆತ್ ನೋಟ್ ಬೆರೆದು ವ್ಯಕ್ತಿ ನೇಣಿಗೆ ಶರಣು-Man writes 24-page letter to cops-kills self : ವ್ಯಕ್ತಿಯೊಬ್ಬ ಪೊಲೀಸರಿಗೆ ಬರೋಬ್ಬರಿ 24 ಪುಟಗಳ ಡೆತ್ ನೋಟ್ ಬರೆದು ತಾನು ನೇಣಿಗೆ ಶರಣಾಗಿದ್ದಾನೆ. ಮೃತನನ್ನು ಮೋಹನ್ (30) ಎಂದು ಗುರುತಿಸಲಾಗಿದೆ.

ಸಾಯುವ ಮುನ್ನ ತನ್ನ ಜೀವನದ ಪೂರ್ತಿ ವಿಷಯವನ್ನು ಬರೆದು DCP ರವಿ.ಡಿ.ಚನ್ನಣ್ಣನವರ್ ಗೆ ಕಳುಹಿಸಿದ್ದಾನೆ, ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವಂತೆ , ತನ್ನ ಹೆಂಡತಿಯ ಅಕ್ರಮ ಸಂಬಂದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.

ಮೃತರಾದ ಮೋಹನ್ ಕುಮಾರ್ ಅವರ ಪತ್ನಿ, ಅವರ ಬಾಸ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದಾಳೆಂದು ಆರೋಪಿಸಿದ್ದಾರೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಮೋಹನ್ ಅವರ ಹೆಂಡತಿಯ ಈ ನಡೆಗೆ ಬಹಳಷ್ಟು ಬೇಸತ್ತಿದ್ದರು ಎನ್ನಲಾಗಿದೆ. ಮೇ 3 ರಂದು ಮಾಗಡಿ ರಸ್ತೆಯ ಚೋಳರಪಾಳ್ಯದಲ್ಲಿನ ಅವರ ಮನೆಯಲ್ಲಿ ಮಧ್ಯರಾತ್ರಿಯಂದು ತನ್ನನ್ನು ತಾನು ನೇಣು ಹಾಕಿಕೊಂಡು ತನ್ನ ಜೀವವನ್ನು ಕಳೆದುಕೊಂಡಿದ್ದಾರೆ.

ಪೊಲೀಸರಿಗೆ ಬರೆದ ವಿವರವಾದ ಪತ್ರದಲ್ಲಿ, ಮೋಹನ್ ತನ್ನ ಬಾಸ್ನೊಂದಿಗೆ ಅವರ ಪತ್ನಿ ಸಂಬಂಧವನ್ನು ಮತ್ತು ಮದುವೆ ಮುಂಚಿನ ಜೀವನ ಹಾಗೂ ನಂತರ ಅವರ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Crime News – Kannada News – Karnataka News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!