ಜನಾರ್ದನ ರೆಡ್ಡಿಗೆ ಕೋರ್ಟ್ ಹೇಳಿದ್ದೇನು ಗೊತ್ತಾ…

Orders To Janardhan Reddy-Not To Enter Bellary

32

Politics : ( itskannada) ರಾಜಕೀಯ ಸುದ್ದಿ : ಜನಾರ್ದನ ರೆಡ್ಡಿಗೆ ಕೋರ್ಟ್ ಹೇಳಿದ್ದೇನು ಗೊತ್ತಾ-Orders To Janardhan Reddy-Not To Enter Bellary – ಕರ್ನಾಟಕ ಚುನಾವಣಾ ಪ್ರಚಾರದ ಬಗ್ಗೆ ಸುಪ್ರೀಂ ಕೋರ್ಟ್ ಗಣಿಧಣಿ ಜನಾರ್ದನ ರೆಡ್ಡಿ ಗೆ ಗಂಭೀರ ಸೂಚನೆ ನೀಡಿ , ಚುನಾವಣಾ ಚಟುವಟಿಕೆಗಳಲ್ಲಿ ನಿರ್ಬಂಧಿಸಲಾಗಿದೆ. ಕರ್ನಾಟಕದ ಬಳ್ಳಾರಿಯಲ್ಲಿ ಅವರ ಸಹೋದರ ಗಾಲಿ ಸೋಮಶೇಖರ್ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು  ಅವರ ಪ್ರಚಾರಕ್ಕೆ ಅನುಮತಿಗಾಗಿ ಜನಾರ್ದನ ರೆಡ್ಡಿ ನ್ಯಾಯಾಲಯದ ಮೊರೆಹೊಗಿದ್ದರು, ಆದರೆ ನ್ಯಾಯಾಲಯ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.

ಕಬ್ಬಿಣದ ಅದಿರಿನ ಅಕ್ರಮ ರಫ್ತು ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಪ್ರಮುಖ ಆರೋಪಿಯಾಗಿದ್ದಾರೆ. ನಾಲ್ಕು ರಾಜ್ಯಗಳಲ್ಲಿ 9 ವಿವಿಧ ಬಂದರುಗಳಿಂದ 12,000 ಕೋಟಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾದಿದ್ದಾರೆ ಎಂದು ಅಂದಾಜಿಸಲಾಗಿದೆ. ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳ ಜೈಲುವಾಸ ಕಳೆದ ನಂತರ, ಜನಾರ್ದನ ರೆಡ್ಡಿ ಜಾಮೀನು ಪಡೆದರು.

ಈ ಹಿನ್ನೆಲೆಯಲ್ಲಿ,ಜನಾರ್ದನ ರೆಡ್ಡಿ ತನ್ನ ಸಹೋದರನಿಗೆ ಬಳ್ಳಾರಿಯಲ್ಲಿ ಪ್ರಚಾರಕ್ಕಾಗಿ ಅನುಮೋದನೆ ಪಡೆಯಲು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಸಲ್ಲಿಸಿದ್ದ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ಹೇಳುವ ಮೂಲಕ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಶ್ರೀರಾಮುಲು, ಸಾಯಿ ಕುಮಾರ್ ಮತ್ತಿತರರು ಸೇರಿದಂತೆ 9 ,ಜನಾರ್ದನ ರೆಡ್ಡಿ ಅವರ ಹತ್ತಿರದ ಗೆಳೆಯರಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಗಮನಿಸಬಹುದು? // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News – Bellary News Online

Open

error: Content is protected !!