ಆ್ಯಂಬುಲೆನ್ಸ್ ಗೆ ದಾರಿಕೊಡಿ ಅಭಿಯಾನ ಸಖತ್ ಸೌಂಡು . . !

Kannada News (itskannada) Bellary ಬಳ್ಳಾರಿ : ಇಂದು ಸಾಮಾಜಿಕ ಕಳಕಳಿ ಜನರಲ್ಲಿ ಇಲ್ಲ ಎಂಬುದು ಹಲವಾರು ಉದಾಹರಣೆ ಕಂಡಿವೆ. ಅಲ್ಲದೆ ಮಾನವೀಯತೆ ಎಂಬುದು ಜನರಲ್ಲಿ ಇಲ್ಲದಂತಾಗಿದೆ. ಯಾಕೆ ಈ ಮಾತು ಅಂತೀರಾ ರಸ್ತೆಯಲ್ಲಿ ಆ್ಯಕ್ಸಿಡೆಂಟ್ ಆದಾಗ ನಾವು ಯಾರು ತಲೆ ಕೆಡಿಸಿಕೊಳ್ಳಿವುದಿಲ್ಲ. ಯಾಕೆ ಹೇಳಿ ಅವರು ಯಾರು ಅನ್ನೋದು ನಮಗೆ ಗೊತ್ತಿರುವುದಿಲ್ಲ.  ಸಮಾಜದಲ್ಲಿ ಏನೇ ಆಗಲಿ ಅದಕ್ಕೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ ಎಂಬ ಭಾವನೆ ನಮ್ಮಲ್ಲಿರುತ್ತದೆ. ಹೀಗೆ ಕೊಲೆ, ಸುಲಿಗೆ ಏನೇ ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದರು ಸುಮ್ಮನಿರುತ್ತೇವೆ. ಅವರು ನಮ್ಮವರಲ್ಲ ಅದಕ್ಕೆ.

ಆ್ಯಂಬುಲೆನ್ಸ್ ಗೆ ದಾರಿಕೊಡಿ ಅಭಿಯಾನ ಸಖತ್ ಸೌಂಡು . . !

ಅಷ್ಟೇಕೆ ಆ್ಯಂಬುಲೆನ್ಸ್  ಹೋಗುವಾಗ ಎಷ್ಟೋ ಜನರು ದಾರಿ ಬಿಟ್ಟು ಕೊಡುವುದಿಲ್ಲ. ರೋಗಿಗೆ ತೊಂದರೆ ಇರುತ್ತದೆ ಎಂದು ಗೊತ್ತಿದ್ದರೂ ಮಾರ್ಗ ಬಿಡದೇ ಮುಂದೆ ಹೋಗುತ್ತಾರೆ. ಸ್ವಲ್ಪ ಲೇಟಾದರೂ ರೋಗಿ ಪ್ರಾಣ ಹೋಗುತ್ತಿರುತ್ತದೆ. ಅದರ ಪ್ರಜ್ಞೆ ನಮ್ಮ ಕಡೆ ಇಲ್ಲದಂತಾಗುತ್ತದೆ.

ಆದರೆ ಬಳ್ಳಾರಿಯ ತೋರಣಗಲ್ ಪೊಲೀಸರ ಕಾರ್ಯಕ್ಕೆ ಶ್ಲಾಘಿಸಬೇಕು. ಅದಕ್ಕೆ ಈಗ ಕನ್ನಡ ನಟರ ಕೈ ಜೋಡಿಸಿದ್ದಾರೆ.  ಪವರಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್  “ಆ್ಯಂಬುಲೆನ್ಸ್ ಗೆ ದಾರಿಕೊಡಿ  ಎಂಬ ಅಭಿಯಾನ “ಕ್ಕೆ ಕೈ ಜೋಡಿಸಿದ್ದಾರೆ.
ಇಂದು ಆರೋಗ್ಯವೇ ಭಾಗ್ಯ ಆರೋಗ್ಯವಂತ ಇದ್ದರೆ ಮನುಷ್ಯ ಎನಾದ್ರು  ಮಾಡಬಹುದು.
ಆ್ಯಂಬುಲೆನ್ಸ್ ಗೆ ದಾರಿಕೊಡಿ ಅಭಿಯಾನವು ಪ್ರತಿ ಜನರು ಪಾಲಿಸಬೇಕು.  ಆ್ಯಂಬುಲೇನ್ಸ್ ರಸ್ತೆ ಮಧ್ಯೆ ಹೋಗುವಾಗ ದಾರಿ ನೀಡಿದರೆ ಸಾವು ಬದುಕು ಮಧ್ಯೆ ಹೋರಾಡುವ ಜನರು ಬದುಕುತ್ತಾರೆ. ಸಾವು ಬದುಕಿನ ಹೊರಾಟದಲ್ಲಿ ಪ್ರತಿ ಸೆಕೆಂಡ್ ಅಮೂಲ್ಯ.
ನಾವ್ ಆ್ಯಂಬುಲೆನ್ಸ್ ಗೆ ದಾರಿಕೊಡಿ ಅಭಿಯಾನಕ್ಕೆ ಕೈ ಜೋಡಿಸಿದ್ದೇವೆ. ಈಗ ನೀವು ಜೋಡಿಸಿ ಅಂಥ ನಮ್ಮ ಮನವಿ. ////  Bellary News Online