ಬೆಳಗಾವಿ : ಯಲ್ಲಮನ ಗುಡ್ಡದಲ್ಲಿ ಬಾರಿ ಮಳೆ

Kannada News (itskannada) ಬೆಳಗಾವಿ: ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಕ್ಷೇತ್ರ  ಯಲ್ಲಮ್ಮನ ಗುಡ್ಡದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ನೀರು ಹೆಚ್ಚಾಗಿ ಬರುತ್ತಿರುವದರಿಂದ ದೇವಿ ದರ್ಶನಕ್ಕೆ ಅಡ್ಡಿ ಉಂಟಾಗಿದೆ.

ಮಳೆ ಮಧ್ಯೆ ದೇವರ ದರ್ಶನ

 ಮಳೆಯ ನಡುವೆಯೂ ಸರದಿ ಸಾಲಿನಲ್ಲಿ ಭಕ್ತರು ದೇವರ ದರ್ಶನಕ್ಕಾಗಿ  ನಿಂತು ಹಾಗೂ ಮಳೆಯ ನೀರು ದಾಟಿ ಬಂದು ಭಕ್ತರು, ಯಲ್ಲಮ್ಮನ ದರ್ಶನ‌ ಪಡೆಯುತ್ತಿದ್ದಾರೆ. ಅಧಿಕ ಮಾಸದ ಹಿನ್ನೆಲೆಯಲ್ಲಿ ಯಲ್ಲಮ್ಮನ ದೇವಸ್ಥಾಕ್ಕೆ ಭಕ್ತರು ದಿನಪ್ರತಿ  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಜನರಿಗೆ ಮಳೆ ಅಡ್ಡಿಪಡಿಸುತ್ತಿದೆ. ///