ಬೆಳಗಾವಿ-ಪರ್ಯಾಯ ಇಂಧನ ಬಳಸಿ-ಜಿ.ಪಂ ಸಿ.ಇ.ಒ ಕರೆ

0 167

Belgaum (itskannada) ಬೆಳಗಾವಿ -ಪರ್ಯಾಯ ಇಂಧನ ಬಳಸಿ-ಜಿ.ಪಂ ಸಿ.ಇ.ಒ ಕರೆ-use alternative fuel-Zilla Panchayat CEO : ಗ್ರಾಮಾಂತರ ಪ್ರದೇಶದ ಇಂಧನ ಸಮಸ್ಯೆ ಪರಿಹರಿಸುವ ಕುರಿತಂತೆ ಸರ್ಕಾರವು ಪರ್ಯಾಯ ಇಂಧನ ಶಕ್ತಿಯ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜೈವಾನಿಲ ಹಾಗೂ ಗೊಬ್ಬರ ನಿರ್ವಹಣೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಕಾರ್ಯಗತಗೊಳಿಸುತ್ತಿದ್ದು, ಇದರಿಂದ ಎಲ್.ಪಿ.ಜಿಗೆ ಪರ್ಯಾಯವಾಗಿ ಗೋಬರಗ್ಯಾಸ ಅನಿಲ ಬಳಕೆಯನ್ನು ಹೆಚ್ಚಿಸುವುದರೊಂದಿಗೆ ಪರಿಸರ ಸಂರಕ್ಷಣೆ, ಉರುವಲು ಕಟ್ಟಿಗೆ ಬಳಕೆ ಮಿತಿಗೊಸುವುದು, ಹೊಗೆರಹಿತ ಅಡುಗೆ ಮನೆ ಹಾಗೂ ಸಾವಯವ ಗೊಬ್ಬರವನ್ನು ಗ್ರಾಮೀಣ ಭಾಗದ ರೈತ ಫಲಾನುಭವಿಗಳಿಗೆ ಒದಗಿಸಲು ಕಾರ್ಯೋನ್ಮುಖವಾಗಿದೆ.

ಬೆಳಗಾವಿ-ಪರ್ಯಾಯ ಇಂಧನ ಬಳಸಿ-ಜಿ.ಪಂ ಸಿ.ಇ.ಒ ಕರೆ

ಗೊಬರಗ್ಯಾಸ ಸ್ಥಾವರ ನಿರ್ಮಾಣಕ್ಕೆ ಅಂದಾಜು 29000/- ವೆಚ್ಛ ತಗುಲುತ್ತಿದ್ದು ಸರ್ಕಾರದಿಂದ 15000/- ಸಹಾಯಧನ ಲಭ್ಯವಿರುತ್ತದೆ ಉಳಿದ ವೆಚ್ಛವಾದ 14000/-ಗಳನ್ನು ಫಲಾನುಭವಿಗಳು ಭರಿಸಿ 2-3 ವರ್ಷದ ಅವದಿಯಲ್ಲಿ ಹೂಡಿಕೆ ಮೊತ್ತದ ಅನಿಲವನ್ನು ಪಡೆಯುವುದರೊಂದಿಗೆ ಮುಂದಿನ ವರ್ಷಗಳಲ್ಲಿ ಉಚಿತವಾಗಿ ಅಡುಗೆ ಅನಿಲವನ್ನು ಬಳಸಿಕೊಳ್ಳಬಹುದಾಗಿದೆ ಈ ಕುರಿತಂತೆ ಜಿಲ್ಲೆಯಲ್ಲಿ ಕಾರ್ಯನಿರತ ಅನುಮೋದಿತ ಟರ್ನ್ ಕೀ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಜೈವಾನಿಲ ಸ್ಥಾವರಗಳನ್ನು ನಿರ್ಮಿಸಿಕೊಡುತಿದ್ದು ಆಸಕ್ತ ಫಲಾನುಭವಿಗಳು ಇವರನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಅವದಿsಯಲ್ಲಿ 11,518 ಜೈವಾನಿಲ ಅನಿಲ ಸ್ಥಾವರಗಳನ್ನು ಗ್ರಾಮೀಣ ರೈತ ಫಲಾನುಭವಿಗಳಿಗೆ ಕಲ್ಪಿಸಿಕೊಟ್ಟಿದ್ದು ಇದರಲ್ಲಿ ಪ್ರತಿಶತ ಶೇ.90 ಜೈವಾನಿಲ ಸ್ಥಾವರಗಳು ಶೌಚಾಲಯ ಸಂಪರ್ಕ ಹೊಂದಿರುವುದರಿಂದ ಹೆಚ್ಚಿನ ಅನಿಲ ಉತ್ಪಾದನೆಯ ಲಾಭವನ್ನು ಫಲಾನುಭವಿಗಳು ಪಡೆಯುತಿದ್ದು ಪ್ರಸಕ್ತ ಸಾಲಿನಲ್ಲಿಯು ಸಹ ಗ್ರಾಮೀಣ ಭಾಗದ ರೈತರು ಇದರ ಸದುಪಯೋಗ ಹೊಂದಲು ಬೆಳಗಾವಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್. ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ///   Belgaum News Kannada –  Belgaum News In Kannada

 

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!