ನಾಗರಿಕ ಸಮಸ್ಯೆಗಳ ಇತ್ಯರ್ಥ ಸಭೆ-ಸಮಸ್ಯೆಗಳ ಪರಿಹಾರ-ಶಾಸಕ ಅನಿಲ ಬೆನಕೆ

Belgaum (itskannada) ಬೆಳಗಾವಿ : ನಾಗರಿಕ ಸಮಸ್ಯೆಗಳ ಇತ್ಯರ್ಥ ಸಭೆ-ಸಮಸ್ಯೆಗಳ ಪರಿಹಾರ ಶಾಸಕ ಅನಿಲ ಬೆನಕೆ : ರಾಮತೀರ್ಥ ನಗರ ಗಣೇಶ ವೃತ್ತದಲ್ಲಿ ನಾಗರಿಕ ಸಮಸ್ಯೆಗಳ ಇತ್ಯರ್ಥ ಸಭೆ ಶಾಸಕ ಅನಿಲ ಬೆನಕೆ ಅಧ್ಯಕ್ಷತೆಯಲ್ಲಿ ಪಾಲಿಕೆ-ಬುಡಾ ಅಧಿಕಾರಿಗಳ ಸಭೆ ನಡೆಯಿತು. ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳು ಏನೇನು ಆಗಿವೆ ಎಂದು ನಾಗರಿಕರು ಶಾಸಕರು & ಅಧಿಕಾರಿಗಳನ್ನು ತೀವೃವಾಗಿ ಪ್ರಶ್ನಿಸಿದರು.

ಸುಮಾರು ₹16 ಲಕ್ಷ ದಂಡ ಸ್ಮಾರ್ಟ್ ಸಿಟಿ ಕಂಪನಿಗೆ ದಂಡ ವಿಧಿಸಲಾಗಿದೆ ಎಂಬ ಮಾಹಿತಿ ನನಗಿದೆ. ಸ್ಮಾರ್ಟ್ ಸಿಟಿ ಕೆಲಸಗಳನ್ನು ಮೊದಲು ರಾಮತೀರ್ಥ ನಗರದಿಂದ ಪ್ರಾರಂಭಿಸಲು ಸಂಸದ ಸುರೇಶ ಅಂಗಡಿ ಕ್ರಮ ಕೈಗೊಂಡಿದ್ದರು. ಅವರ ಸೂಚನೆ ನಂತರವೂ ಅಭಿವೃದ್ಧಿ ಕೆಲಸ ಎಲ್ಲಿಗೆ ಬಂದಿದೆ ಎಂಬುವುದನ್ನು ಅಧಿಕಾರಿಗಳು ಜನತೆಗೆ ತಿಳಿಸಲಿ ಎಂದರು.
ಕೆರೆ ಅಭಿವೃದ್ಧಿಗೆ ಎರಡು ಸಲ ಹಣ:ಲೇಕ್ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿಯ ಹಣವೂ ಇದೆ. ಜತೆಗೆ ಬುಡಾ ಸಹ ಲೇಕ್ ಅಭಿವೃದ್ಧಿ ಹಣ ಸಿಗುತ್ತದೆ. ಎಲ್ಲಿ ಹೋಯ್ತು ಡಬಲ್ ಹಣ ಎಂದು ನಾಗರಿಕರು ಅಧಿಕಾರಿಗಳನ್ನು ಪ್ರಶ್ನಿಸಿದರು.

ರಾಮತೀರ್ಥ ನಗರದಲ್ಲಿ ಹಿರಿಯ ನಾಗರಿಕರಿಗೆ ಜೂಡ್ರುವ ಬೆಂಚಗಳಿಲ್ಲ, ಬೀದಿದೀಪಗಳಿಲ್ಲ, ರಸ್ತೆಗಳು ಸರಿಯಾಗಿ ಇಲ್ಲ. ಅದರಲ್ಲೂ ಕೆಲವು ರಸ್ತೆಗಳು 20 ವರ್ಷಗಳಿಂದ ರಸ್ತೆಯೇ ನಿರ್ಮಿಸಿಲ್ಲ ಎಂದಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ರಾಮತೀರ್ಥ ನಗರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಎಂದು ಜನ ಆಗ್ರಹಿಸಿದರು.

ಬೀದಿ ದೀಪ, ರಸದತೆ, ಉದ್ಯಾನ, ಬೆಂಚ್ ಮತ್ತಿತರ ಸೌಲಭ್ಯಗಳನ್ನು ಆದ್ಯತೆ ಮೇಲೆ ಕೊಡಲಾಗುವುದು ಎಂದು ಎಂಜಿನೀಯರ್ ಆರ್. ಎಸ್. ನಾಯಕ ತಿಳಿಸಿದರು. ರಾಮತೀರ್ತ ನಗರ ರಹವಾಸಿಗಳ ಸಂಘ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15 ದಿನಗಳಲ್ಲಿ ಆದ್ಯತೆ ಮೇರೆಗೆ ರಹವಾಸಿಗಳ ಸಮಸ್ಯೆ ಬಗೆಹರಿಸಲು ಶ್ರಮಿಸುವೆ ಎಂದು ಶಾಸಕ ಅನಿಲ ಬೆನಕೆ ನಾಗರಿಕರಿಗೆ ಭರವಸೆ ನೀಡಿದರು. ಬುಡಾ ಸ್ವತಃ ತಾನೇ ಅಭಿವೃದ್ಧಿ ಮಾಡಲಿ ಇಲ್ಲವೇ ₹ 80 ಕೋಟಿ ಹಣ ಪಾಲಿಕೆಗೆ ಹಸ್ತಾಂತರ ನೀಡಲಿ. ಈ ಬಗ್ಗೆ ಬುಡಾ ಕಮಿಷ್ನರ್ ಜತೆಗೆ ಸಭೆ ನಡೆಸುತ್ತೇವೆ ಎಂದು ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ತಿಳಿಸಿದರು.
ಕಮಿಷ್ನರ್ ಕೃಷ್ಟೇಗೌಡ ತಾಯನ್ನವರ, ಆರ್, ಎಸ್. ನಾಯಕ, ಪರಿಸರ ಅಧಿಕಾರಿ ಉದಯಕುಮಾರ ಮತ್ತಿತರರು ಉಪಸ್ಥಿತರಿದ್ದರು. /// Belgaum News Kannada –  Belgaum News In Kannada