ಬೆಳಗಾವಿ-ತರುಣ ಭಾರತ ದಿನ ಪತ್ರಿಕೆಯ ವಿರುದ್ಧ ಪ್ರತಿಭಟನೆ

Protest against Tarun Bharat newspaper

Belgaum (itskannada) ಬೆಳಗಾವಿ-ತರುಣ ಭಾರತ ದಿನ ಪತ್ರಿಕೆಯ ವಿರುದ್ಧ ಪ್ರತಿಭಟನೆ -Protest against Tarun Bharat newspaper : ತರುಣ ಭಾರತ ದಿನ ಪತ್ರಿಕೆ ಜಾತಿ ,ಧರ್ಮದ ,ಭಾಷೆಯ ನಡುವೆ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ , ಕೂಡಲೇ ಅದಕ್ಕೆ ಕಡಿವಾಣ ಆಕಿ ಪತ್ರಿಕೆಯನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯ ‘ತರುಣ ಭಾರತ’ ಪತ್ರಿಕೆ ವಿರುದ್ದ..!! ಈಗ ಜನರ ಆಕ್ರೋಶ ವ್ಯಕ್ತವಾಗಿದ್ದು, ನಗರದ ಚನ್ನಮ್ಮ ವೃತ್ತದಲ್ಲಿ ‘ತರುಣ ಭಾರತ’ ಪತ್ರಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ-ತರುಣ ಭಾರತ ದಿನ ಪತ್ರಿಕೆಯ ವಿರುದ್ಧ ಪ್ರತಿಭಟನೆ

ಶುಕ್ರವಾರ ಜನನಿ ಸಮಾಜ ಸೇವಾ ಸಂಸ್ಥೆಯು ಪತ್ರಿಕೆಯ ವಿರುದ್ದ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ದೂರುಮನವಿ ಸಲ್ಲಿಸಿತು. ಪತ್ರದ ಸಾರಾಂಶದಲ್ಲಿ ಪತ್ರಿಕೆಯ ಸಂಪಾದಕ ಕಿರಣ ಠಾಕೂರ ಅವರು ಇಲ್ಲಿನ ಕನ್ನಡ- ಮರಾಠಿ ಬಂದುಗಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಕನ್ನಡ-ಮರಾಠಿ ನಡುವೆ ಇರುವ ಬಾಂಧವ್ಯವನ್ನು ಹಾಳು ಮಾಡುತ್ತಿದ್ದಾರೆ. ಸಮಾಜವನ್ನು ಅಸ್ಥಿರಗೊಳಿಸುತ್ತಿದ್ದಾರೆ. ಈ ಮೂಲಕ ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿದ್ದಾರೆ.’ತರುಣ ಭಾರತ’ ಪತ್ರಿಕೆಯನ್ನು ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರಿಗೆ ಕೋರಿದ್ದಾರೆ.
ಆಡಿಯೋ ವೈರಲ್:ವಿಧಾನಸಭಾ ಚುನಾವಣೆ ಮುಂಚೆಯೇ ಮರಾಠಿ ಭಾಷಿಕ ವ್ಯಕ್ತಿಯೊಬ್ಬ ಪತ್ರಿಕಾ ಕಚೇರಿಗೆ ಕರೆ ಮಾಡಿ ‘ಪತ್ರಿಕಾ ಧರ್ಮ’ದ ಪಾಠ ಮಾಡಿ ಜನತೆಯ ಪರವಾಗಿ ಅಸಮಧಾನ ಹೊರ ಹಾಕಿದ್ದ ಆಡಿಯೋ ವೈರಲ್ ಆಗಿತ್ತು.
ವಿಡಿಯೋ ವೈರಲ್:ಅದಾದ ನಂತರ ಹಳ್ಳಿಗಳಲ್ಲಿ ವರದಿಗೆ ತೆರಳಿದ್ದ ಸದರಿ ಪತ್ರಿಕೆ ವರದಿಗಾರರ ತಂಡದ ಎದುರು ಪತ್ರಿಕೆ ಓದುಗರು ಅಸಮಧಾನ & ಅಸಹನೆ ವ್ಯಕ್ತಪಡಿಸಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಇಂದು ನಡೆದ ಪ್ರತಿಭಟನೆ ವೇಳೆ ರಾಜೇಂದ್ರ ಪರಿ, ಮಂಜುನಾಥ ಮಾಳಿ, ಪ್ರವೀಣ ದೇವರಕ್ಕಿ, ಸಂತೋಷ ಸಾವಂತ, ಮಹೇಶ ಚವ್ಹಾನ ಸೇರಿದಂತೆ ಅನೇಕರು ಭಾಗವಹಿಸಿದ್ದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Belgaum News Kannada

WebTitle : ಬೆಳಗಾವಿ-ತರುಣ ಭಾರತ ದಿನ ಪತ್ರಿಕೆಯ ವಿರುದ್ಧ ಪ್ರತಿಭಟನೆ -Protest against Tarun Bharat newspaper