ನೀರು ತರಲು ಹೋದ ಯುವತಿ ಮೇಲೆರಗಿದ ಕಾಮುಕ

Belgaum – Crime News  (itskannadaಹುಕ್ಕೇರಿ: ನೀರು ತರಲು ಹೋದ ಯುವತಿ ಮೇಲೆರಗಿದ ಕಾಮುಕ : ಕುಡಿಯುವ ನೀರು ತರಲು ಗ್ರಾಮದ ಬಾವಿಗೆ ತೆರಳಿದ್ದ ಯುವತಿಯೊರ್ವಳನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಪ್ರಕರಣ  ತಡವಾಗಿ ಬೆಳಕಿಗೆ ಬಂದಿದೆ.

ಮೇ. 25 ರಂದು  ಸಮೀಪದ ಕೊಟಬಾಗಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಅತ್ಯಾಚಾರಕ್ಕೆ  ಒಳಗಾದ 19 ವರ್ಷದ ಯುವತಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಘಟನೆಯ ಮಾಹಿತಿ ಪಡೆದಿರುವ ಪೊಲೀಸರು ಆನಂದ ಎಂಬುವವನನ್ನು ಬಂಧಿಸಿದ್ದಾರೆ.

ಎಂದಿನಂತೆ ಯುವತಿ ಮನೆಗೆ ನಿರು ತರಲು ಗ್ರಮದಲ್ಲಿಂದ ಕೊಂಚ ದೂರವಿರುವ ಬಾವಿಕಡೆಗೆ ತೆರಳಿದ್ದಾಳೆ. ಇವಳನ್ನೇ ಹಿಂಬಾಲಿಸಿದ ಕಾಮುಕ ಬಾವಿಯ ಬಳಿಯ ಕಬ್ಬಿನ ಗದ್ದೆಗೆ ಎಳೆದೊಯ್ದು ಈ ಕ್ರುತ್ಯವೆಸಗಿದ್ದಾನೆ.

ಆನಂದ ಕಾಮಶೆಟ್ಟಿ ಎಂಬ ಯುವಕ ಅತ್ಯಾಚಾರ ಮಾಡಿರುವ ಆರೋಪಿ ಎನ್ನಲಾಗಿದೆ. ಯುವತಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆರೋಪಿ ಆನಂದ ಕಾಮಶೆಟ್ಟಿಯನ್ನ ಹುಕ್ಕೇರಿ ಗ್ರಾಮೀಣ  ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Crime News – Belgaum News Kannada