ಬಾಗಲಕೋಟೆ-ಭೀಕರ ಅಪಘಾತ ಇಬ್ಬರು ಪೊಲೀಸ್ ಅಧಿಕಾರಿಗಳ ಸಾವು

Bagalkot (itskannada)ಭೀಕರ ಅಪಘಾತ ಇಬ್ಬರು ಪೊಲೀಸ್ ಅಧಿಕಾರಿಗಳ ಸಾವು : ಬಾಗಲಕೋಟೆ ಯಲ್ಲಿ ಪೋಲಿಸ್ ವಾಹನ ಟ್ರಕ್ ಗೆ ಡಿಕ್ಕಿ ಹೊಡೆದ ನಂತರ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯು ಸಾವನ್ನಪ್ಪಿದ್ದಾರೆ. ಪೊಲೀಸರು ಚುನಾವಣಾ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳಿದ್ದರು.

ಘಟನೆಯು ಬಾಗಲಕೋಟೆ ತಾಲೂಕಿನ ಕೂಡಲ ಸಂಗಮ ಕ್ರಾಸ್ನಲ್ಲಿ ಬುಧವಾರ ಮಧ್ಯರಾತ್ರಿಯಂದು ನಡೆದಿದ್ದು ಚಾಲಕ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ನಿಧನರಾಗಿದ್ದಾರೆ. ಘಟನೆಯ ತೀವ್ರತೆಗೆ ವಾಹನ ನಜ್ಜುಗುಜ್ಜಾಗಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರನ್ನು ಸಿಐಡಿ ಡಿವೈಎಸ್ಪಿ ಪಿ ಬಾಲಗೌಡ (55), ಸಿಐಡಿ ಸಿಪಿಐ ಕೆಹೆಚ್ ಶಿವಸ್ವಾಮಿ (55) ಮತ್ತು ಚಾಲಕ ವೇಣು ಗೋಪಾಲ್ (23) ಎಂದು ಗುರುತಿಸಲಾಗಿದೆ. ದೇಹಗಳನ್ನು ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಡಿವೈಎಸ್ಪಿ ಪಿ ಬಾಲಗೌಡ ಅಪರಾಧ ವಿಭಾಗದಲ್ಲಿ ತುಮಕೂರು ಮತ್ತು ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು.
ಜೀಪಿನ ಚಾಲಕ ರಸ್ತೆಯೊಂದರಲ್ಲಿ ನಿಲುಗಡೆಯಾಗಿದ್ದ ಲಾರಿಗೆ ಡಿಕ್ಕಿಹೊಡೆದಾಗ ಅಪಘಾತ ಸಂಭವಿಸಿದೆ. ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ ಮತ್ತು ಪೊಲೀಸ್ ಹುಡುಕಾಟ ನಡೆಯುತ್ತಿದೆ.

//// ಈ ವಿಭಾಗದ   ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ-   Bagalkot News Online – Crime News -Karnataka Crime News