ಅತ್ತಿಬೆಲೆ : ಟೋಲ್‌ನಲ್ಲಿ ಲೋಕಲ್ ವಾಹನಗಳಿಗೆ ಬ್ರೇಕ್

Kannada News(itskannada) ಅತ್ತಿಬೆಲೆ : ಟೋಲ್‌ನಲ್ಲಿ ಲೋಕಲ್ ವಾಹನಗಳಿಗೆ ಬ್ರೇಕ್

ಬಂದ ಬಂದವರೆಲ್ಲಾ , ಲೋಕಲ್ ನಾಯಕರ ಹೆಸರು ಹೇಳಿ ಶುಲ್ಕ ನೀಡದೆ , ಹೋಗುತ್ತಿದ್ದಾರೆ ಎಂದು ಟೋಲ್ ಸಿಬ್ಬಂದಿ ಆರೋಪಿಸಿದ್ದಾರೆ. ಇದೆ ವಿಚಾರವಾಗಿ ಟೋಲ್ ಸಿಬ್ಬಂದಿಗಳು ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಿದ್ದಾರೆ. ಇಲ್ಲಿನ ಕೆಲ ವಾಹನಗಳು ಕೆಲ ರಾಜಕೀಯ ಸ್ಥಳಿಯರ ಹೆಸರು ಬಳಸಿ ಶುಲ್ಕ ಪಾವತಿಸಲು ನಿರಾಕರಸುತ್ತಿದ್ದರಂತೆ , ತಮಿಳು ನಾಡಿಗೆ ತೆರಳುವ ಅನೇಕ ಲಾರಿಗಳು ಇದೇ ಉಪಾಯ ಕಂಡು ಕೊಂಡು ಟೋಲ್ ಗುತ್ತಿಗೆದಾರರಿಗೆ, ಮಾಲೀಕರಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿತ್ತಂತೆ.

ಇದೇ ವಿಚಾರವಾಗಿ ಆರೋಪಿಸಿರುವ ಸ್ಥಳಿಯರು , ಟೋಲ್ ನವರು ಸರಿಯಾದ ಸರ್ವಿಸ್ ರಸ್ತೆ ನಿರ್ಮಿಸಿಲ್ಲ , ಕೇವಲ ಅವರ ಆಧಾಯ ಮಾತ್ರ ನೋಡಿಕೊಳ್ಳುತ್ತಾರೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಅವರ ಗಮನವಿಲ್ಲ ಎಂದಿದ್ದಾರೆ.

ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡಿದ್ದಾರೆ. ಈ ನಡುವೆ ಟೋಲ್ ಸಿಬ್ಬಂದಿ ಟೋಲ್ ಲೇನ್ ಗಳನ್ನು ಸಂಪೂರ್ಣ ಬಂದ್ ಮಾಡಿದುದಕ್ಕೆ ಟ್ರಾಪಿಕ್ ಜಾಮ್ ಉಂಟಾಗಿತ್ತು , ಪೊಲೀಸರು ಆ ಟ್ರಾಫಿಕ್ ಕ್ಲಿಯರ್ ಮಾಡಲು ಪರದಾಡಬೇಕಾಯಿತು. ///