ಆನೇಕಲ್-ಯಾರು ಶಿಕ್ಷಣದಿಂದ ವಂಚಿತರಾಗಬಾರದು-ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್

0 79

Anekal (itskannada) ಆನೇಕಲ್ ತಾಲ್ಲೂಕು ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್ ಅವರು ರವಿ ಮಾಲೀಕತ್ವದ ಇಟ್ಟಿಗೆ ಕಾರ್ಖಾನೆಯ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಮೂಲಕ ಚಾಲನೆ ನೀಡಿದರು.

ಯಾರು ಶಿಕ್ಷಣದಿಂದ ವಂಚಿತರಾಗಬಾರದು-ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್

ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು, ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಹೇಳಿದರು.
ಅವರು ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನದಲ್ಲಿ ಮಕ್ಕಳನ್ನು ದಾಖಲು ಮಾಡಿಕೊಂಡು ಮಾತನಾಡಿದರು, ಆನೇಕಲ್ ತಾಲ್ಲೂಕಿನಲ್ಲಿ ಇಟ್ಟಿಗೆ ಕಾರ್ಖಾನೆಗಳು ಹೆಚ್ಚಾಗಿದ್ದು, ಕೆಲಸದ ನಿಮಿತ್ತ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಗುಳೆ ಬಂದಿರುತ್ತಾರೆ, ಅವರು ಮಕ್ಕಳು ಶಾಲೆಗೆ ಸೇರಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಅದಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಬೇಕು, ಸರ್ಕಾರದಿಂದ ನೀಡುವ ಉಚಿತ ಸಮವಸ್ತ್ರ, ಪುಸ್ತಕಗಳು ಸೇರಿದಂತೆ ಪ್ರೋತ್ಸಾಹದಾಯಕ ಸೌಲಭ್ಯಗಳನ್ನು ಪಡೆಯ ಬೇಕು ಎಂದು ಹೇಳಿದರು.

ಪೋಷಕರಿಗೆ ಹಣ ಬೇಕು, ಮಕ್ಕಳಿಗೆ ವಿದ್ಯೆ ಬೇಕು ಈ ನಿಟ್ಟಿನಲ್ಲಿ ಇಟ್ಟಿಗೆ ಕಾರ್ಖಾನೆಯ ಮಾಲೀಕರು ಸರ್ಕಾರದ ನಿಯಮದಂತೆ ಕೆಲಸ ಕೊಡುವ ಮುನ್ನ ಅವರು ಮಕ್ಕಳು ಶಾಲೆಗೆ ದಾಖಲಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಮರಸೂರು ಶಾಲೆಯ ಮಕ್ಕಳು ಘೋಷಣೆಗಳೊಂದಿಗೆ ಮರಸೂರು ಗ್ರಾಮದಲ್ಲಿ ಜಾಥ ನಡೆಸಿ ಸಾರ್ವಜನಿಕರಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಅರಿವು ಮೂಡಿಸಲಾಯಿತು, ಮರಸೂರು ಬಳಿ ಇರುವ ಇಟ್ಟಿಗೆ ಕಾರ್ಖಾನೆಯಲ್ಲಿ ಪೋಷಕರು, ಮಕ್ಕಳೊಂದಿಗೆ ಸಭೆ ನಡೆಸಿ ಸ್ಥಳದಲ್ಲೇ ದಾಖಲು ಮಾಡಿಕೊಳ್ಳಲಾಯಿತು.

ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎನ್. ಶಂಕರಮೂರ್ತಿ, ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಶಿಕ್ಷಣ ಸಂಯೋಜಕ ಪ್ರಕಾಶ್, ಜಿಲ್ಲಾ ಸಂಘದ ಖಜಾಂಚಿ ಕೆ. ಚಂದ್ರಶೇಖರ್, ಉಪಾಧ್ಯಕ್ಷೆ ಸೌಭಾಗ್ಯ, ಬಿಆರ್‍ಪಿಗಳಾದ ಷಣ್ಮುಖ, ರಾಮಕೃಷ್ಣಯ್ಯ, ಬಿಐಆರ್‍ಟಿ ಮಂಜುನಾಥ್, ಸಮೂಹ ಸಂಪಮ್ಮೂಲ ವ್ಯಕ್ತಿಗಳಾದ ಜಿ.ನಾಗರಾಜು, ಧನಲಕ್ಷ್ಮಿ, ಪಲ್ಲವಿ, ರೂಪ, ಮಹದೇವಯ್ಯ, ರಮೇಶ್, ಸಂಪಂಗಿ, ರಾಘವೇಂದ್ರ, ನಿಂಗರಾಜಪ್ಪ, ಭಾರತಿ ಶಿಕ್ಷಕರಾದ ಪರಮೇಶ್, ರಾಘವೇಂದ್ರ, ಸತೀಶ್, ಮುರಳಿ ಮುಂತಾದವರು ಜಾಥದಲ್ಲಿ ಪಾಲ್ಗೊಂಡಿದ್ದರು. /// Anekal News Kannada

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!