ಆನೇಕಲ್ : ರಾಮಲಿಂಗಾರೆಡ್ಡಿ ಗೆ ಸಚಿವ ಸ್ಥಾನ ಒತ್ತಾಯಿಸಿ ಬೃಹತ್ ಪ್ರತಿಭಟನೆ

Kannada News (itskannada) ಆನೇಕಲ್ : ರಾಮಲಿಂಗಾರೆಡ್ಡಿ ಗೆ ಸಚಿವ ಸ್ಥಾನ ಒತ್ತಾಯಿಸಿ ಬೃಹತ್ ಪ್ರತಿಭಟನೆ : ರಾಮಲಿಂಗಾರೆಡ್ಡಿ ರವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ , ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಾದ ಆನೇಕಲ್ ರೆಡ್ಡಿ ಸಮುದಾಯದಿಂದ ಬಾರೀ ಪ್ರತಿಭಟನೆ ಕೈಗೊಳ್ಳಲಾಯಿತು,  ರಾಮಲಿಂಗಾರೆಡ್ಡಿ ರವರಿಗೆ ಸಚಿವ
ಸ್ಥಾನ ನೀಡುವಂತೆ ಒತ್ತಾಯಿಸಿ  ಬೃಹತ್ ಪ್ರತಿಭಟನೆ ಮಾಡಲಾಯಿತು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆನ್ನಾಗರ, ಚಂದಾಪುರ ಹೆನ್ನಾಗರ ಬಳಿ ಪ್ರತಿಭಟನೆಗೆ ಸೇರಿದ್ದ ಭಾರಿ ಜನಸಮೂಹ ಹಾಗೂ ಪ್ರತಿಭಟನಾಕಾರರು.
ನಡು ರಸ್ತೆಯಲ್ಲಿಯೇ ಕೂತು ಪ್ರತಿಭಟನೆ ಮಾಡಿದ ಅಭಿಮಾನಿಗಳು ,ಪ್ರತಿಭಟನೆ ಕಾರರನ್ನ ಮನವೊಲಿಸಲು ಮುಂದಾದ ಪೊಲೀಸರು .
ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಎರಡು ಕಡೆ ಬಂದ್ , ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು , ಆನೇಕಲ್ , ಹೊಸಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಸಚಿವ ಸ್ಥಾನ ವಂಚಿತರ ಕಾರ್ಯಕರ್ತರು ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.
ದಿಡೀರ್ ಪ್ರತಿಭಟನೆಯಿಂದಾಗಿ ಸುಮಾರು 5 ಕಿಲೋ ವಾಹನಗಳು ನಿಂತಲ್ಲೇ ನಿಂತಿದ್ದವು . ///