ಆನೇಕಲ್ : ರಕ್ತಧಾನದ ಮಹತ್ವ ಕುರಿತು ಜಾಥಾ- ರಕ್ತಧಾನಿಗಳಿಗೆ ಸನ್ಮಾನ

Kannada News (itskannada) Anekal ಆನೇಕಲ್ : ರಕ್ತಧಾನದ ಮಹತ್ವ ಕುರಿತು ಜಾಥಾ-ರಕ್ತಧಾನಿಗಳಿಗೆ ಸನ್ಮಾನ

ನಿತ್ಯಾನಂದ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾರ್ಥಿ ಕೂಟ ಮತ್ತು ರಾಜ್ಯ ಒಕ್ಕಲಿಗರ ಜಾಗ್ರ್ರುತಿ ಸಂಘದ ಸಂಯುಕ್ತಾಶ್ರಯದಲ್ಲಿ ದಿಂದ ಆಯೋಜಿಸಿದ್ದ ರಕ್ತಧಾನದ ಮಹತ್ವ ಕುರಿತು ಆಯೋಜಿಸಿದ್ದ ಜಾಥಾ ಹಾಗೂ ವೇದಿಕೆ ಕಾಯಕ್ರಮದಲಿ ರಕ್ತದಾನಿಗಳನ್ನು ಸನ್ಮಾನಿಸಿದರು.

ಯುವ ಪೀಳಿಗೆ ರಕ್ತಧಾನದ ಮಹತ್ವ ತಿಳಿಯಬೇಕು – ಕುಮಾರ ಚಂದ್ರಶೇಖರ ಸ್ವಾಮೀಜಿ

ಯುವ ಶಕ್ತಿ ರಕ್ತ ಧಾನವನ್ನು ಮಾಡುವ ಮೂಲಕ ಒಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರ ಸ್ವಾಮಿಜಿ ಹೇಳಿದರು.
ಅವರು ಜಿಗಣಿಯ ನಿತ್ಯಾನಂದ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾರ್ಥಿ ಕೂಟ ಮತ್ತು ರಾ

ಆನೇಕಲ್ : ರಕ್ತಧಾನದ ಮಹತ್ವ ಕುರಿತು ಜಾಥಾ- ರಕ್ತಧಾನಿಗಳಿಗೆ ಸನ್ಮಾನ-itskannada 1

ಜ್ಯ ಒಕ್ಕಲಿಗರ ಜಾಗೃತಿ ಸಂಘದ ಸಂಯುಕ್ತಾಶ್ರಯದಲ್ಲಿ ದಿಂದ ಆಯೋಜಿಸಿದ್ದ ರಕ್ತಧಾನದ ಮಹತ್ವ ಕುರಿತು ಆಯೋಜಿಸಿದ್ದ ಜಾಥಾ ಹಾಗೂ ವೇದಿಕೆ ಕಾಯಕ್ರಮದಲ್ಲಿ ಮಾತನಾಡಿ, ವ್ಯಕ್ತಿಯೊಬ್ಬ ಮೂರು ತಿಂಗಳಿಗೊಮ್ಮೆ ರಕ್ತಧಾನ ಮಾಡುವುದುದರಿಂದ ಆರೋಗ್ಯ ಉತ್ತಮವಾಗಿರುತ್ತದೆ, ವಿದ್ಯಾರ್ಥಿಗಳು ರಕ್ತಧಾನದ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿ, ಈ ದೇಶದಲ್ಲಿ ಯ್ತುವ ಶಕ್ತಿ ಮನಸ್ಸು ಮಾಡಿದರೆ ಯಾವುದೇಸಾದನೆಯನ್ನಾದರೂ ಮಾಡಬಹುದು, ತುರ್ತು ಪರಿಸ್ಥಿತಿಯಲ್ಲಿ ರಕ್ತ ಅವಶ್ಯಕತೆಯ ಬಗ್ಗೆ ಅದನ್ನು ಅನುಭವಿಸಿರುವವರಿಗೆ ಮಾತ್ರ ನೋವಿನ ಅರಿವಾಗುತ್ತದೆ, ರಕ್ತಧಾನ ಮಾಡುವುದನ್ನು 18 ವರ್ಷದ ಮೇಲ್ಪಟ್ಟವರು ಮೈಗೂಡಿಸಿಕೊಳ್ಳಬೇಕು ಎಂದರು.

ರಾಜಾಪುರ ಸಂಸ್ಥಾನ ಮಠದ ಪಟ್ಟದ ರಾಜೇಶ್ವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮತ ಚಲಾವಣೆಗೆ ನೀಡುವ ಮಹತ್ವವನ್ನು ರಕ್ತ ಧಾನಕ್ಕೂ ನೀಡಬೇಕು,ದಾನಗಳಲ್ಲಿ ರಕ್ತ ಧಾನ ಶ್ರೇಷ್ಟವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಜಿಗಣಿಯ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಒಕ್ಕಲಿಗರ ಜಾಗ್ರತಿ ಸಂಘದ ರಾಜ್ಯಾಧ್ಯಕ್ಷ ನಾಯನಹಳ್ಳಿ ಮುನಿರಾಜು ಗೌಡ, ಕರ್ನಾಟಕ ವಿದ್ಯಾರ್ಥಿ ಕೂಟದ ಅಧ್ಯಕ್ಷ ಹರೀಶ್, ಹರ್ಶಿತ, ವಿದ್ಯಾಮೂರ್ತಿ, ಪ್ರಹಲ್ಲಾದ್ ಗೌಡ,ನಿತ್ಯಾನಂದ ಶಾಲೆಯ ಪ್ರಾಂಶುಪಾಲ ರಘುನಾಥ ರಾವ್, ಹಳೆ ವಿದ್ಯಾರ್ಥಿ ಜಿ.ಕೆ.ನಾರಾಯಣ ಇದ್ದರು.
ಸನ್ಮಾನ-ಕನ್ನಡ ಸಾಹಿತ್ಯ ಪರಿಷಯ್ ದಕ್ಷಿಣ ತಾಲೂಕು ಅಧ್ಯಕ್ಷ ನಾಗಲೇಖ, ಹೊಸಬೆಳಕು ಟ್ರಸ್ಟ್‍ನ ಅಧ್ಯಕ್ಷ ಜಿಗಣಿ ರಾಮಕ್ರಷ್ಣ, ಕರವೇ ಮುಖಂಡ ಕಬಡ್ಡಿ ಮಂಜು, ಮತ್ತಿತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ///  Anekal News Kannada