ಡಿ.ಕೆ.ಶಿವಕುಮಾರ್ ರನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು-ಹುಲಿಮಂಗಲ ರಾಜಗೋಪಾಲ್ ರೆಡ್ಡಿ

Anekal (itskannada) ಆನೇಕಲ್. ಮೇ. 29- ಡಿ.ಕೆ.ಶಿವಕುಮಾರ್ ರನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು-ಹುಲಿಮಂಗಲ ರಾಜಗೋಪಾಲ್ ರೆಡ್ಡಿ :  ಡಿ.ಕೆ. ಶಿವಕುಮಾರ್ ರವರನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಬೇಕು ಎಂದು ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಹುಲಿಮಂಗಲ ರಾಜಗೋಪಾಲ್ ರೆಡ್ಡಿ ಆಗ್ರಹಿಸಿದರು.
ಅವರು ಹುಲಿಮಂಗಲ ಗ್ರಾಮದಲ್ಲಿ ಕರೆಯಲಾಗಿದ್ದ ಪತ್ರಿಕಾ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡಿದರು, ರಾಜ್ಯದಲ್ಲಿ ಸಮಿಶ್ರ ಸರ್ಕಾರ ರಚನೆಯಾಗಿದೆ ಎಂದರೆ ಅದು ಡಿ.ಕೆ. ಶಿವಕುಮಾರ್ ರವರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಡಿ.ಕೆ.ಶಿವಕುಮಾರ್ ರನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು-ಹುಲಿಮಂಗಲ ರಾಜಗೋಪಾಲ್ ರೆಡ್ಡಿ

ರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳಯಬೇಕಾದರೆ ಜೊತೆಗೆ ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರದತ್ತ ಬರಬೇಕಾದರೆ ಡಿ.ಕೆ.ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷದ ರಾಜ್ಯಧ್ಯಕ್ಷರಾಗಿ ಆಯ್ಕೆಯಾದರೆ ಮಾತ್ರ ಅದು ಸಾಧ್ಯವಾಗಿದೆ ಎಂದರು.
ಬೊಮ್ಮನಹಳ್ಳಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನ ಪತ್ನಿ ಸುಷ್ಮಾ ರಾಜ್ ಗೋಪಾಲ್ ರೆಡ್ಡಿರವರು ಸ್ವರ್ಧೆಸಿದ್ದರು ಆದರೆ ಪಕ್ಷದಲ್ಲಿನ ಕೆಲವು ಕುತಂತ್ರಿಗಳಿಂದ ಸೋಲನ್ನು ಕಾಣ ಬೇಕಾಯಿತು ಬಿಟ್ಟರೆ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿಲ್ಲ ಎಂದರು.

ಮುಖ್ಯ ಮಂತ್ರಿ ಕುಮಾರಸ್ವಾಮಿರವರು ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡುವುದಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಆದರೆ ಕೆಲವು ಪ್ರಭಾವಿಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಹಕಾರ ಸಂಘಗಳು ಮತ್ತು ರಾಷ್ಠೀಕೃತ ಬ್ಯಾಂಕ್‍ಗಳಲ್ಲಿ ರೈತರ ಹೆಸರಿನಲ್ಲಿ ಸಾಲವನ್ನು ಪಡೆದು ಸರ್ಕಾರದ ಬೊಕ್ಕಸಕ್ಕೆ ಮೋಸ ಮಾಡಲು ಮುಂದಾಗಿದ್ದು, ಕುಮಾರಸ್ವಾಮಿರವರು ಸಾಲಮನ್ನಾ ಮಾಡುವ ಸಂಧರ್ಭದಲ್ಲಿ ರೈತರ ಹೆಸರಿನಲ್ಲಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡುವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂಬ ಕಾನೂನನ್ನು ಜಾರಿಗೆ ತಂದಾಗ ಮಾತ್ರ ಅರ್ಹ ರೈತರಿಗೆ ಸರ್ಕಾರದ ಹಣ ಪೂರ್ಣ ಪ್ರಮಾಣದಲ್ಲಿ ಕೈ ಸೇರುತ್ತದೆ ಎಂದರು.

ಪಕ್ಷದ ಕೆಲವರ ಷಡಂತ್ಯದಿಂದ ನಮಗೆ ಬೆಂಗಳೂರು ದಕ್ಷಿಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಕೈತಪ್ಪಿತು ಆದರೆ ಮುಂದಿನ ದಿಗಳಲ್ಲಿ ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನಯೇ ಇಲ್ಲ ಎಂದು ಹೇಳಿದರು.
ಚಿತ್ರ ಇದೆ.
ಹುಲಿಮಂಗಲ ಗ್ರಾಮದಲ್ಲಿ ಕರೆಯಲಾಗಿದ್ದ ಪತ್ರಿಕಾ ಹೇಳಿಕೆಯನ್ನು ಉದ್ದೇಶಿಸಿ ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಹುಲಿಮಂಗಲ ರಾಜಗೋಪಾಲ್ ರೆಡ್ಡಿ ಮಾತನಾಡಿದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ –  Anekal News Kannada