ಗ್ರಾಮಕ್ಕೆ ನುಗ್ಗಿದ ಆನೆಗಳು-ಸೆಲ್ಫಿಗೆ ಮುಂದಾದ ಯುವಕರು

Kannada News (itskannada) Anekal ಆನೇಕಲ್ : ಗ್ರಾಮಕ್ಕೆ ನುಗ್ಗಿದ ಆನೆಗಳು-ಸೆಲ್ಫಿಗೆ ಮುಂದಾದ ಯುವಕರು : ಜೈವಿಕ ಉದ್ಯಾನವನದಲ್ಲಿ ಇರಬೇಕಾದ ಆನೆಗಳ ಹಿಂಡು ಗ್ರಾಮದತ್ತ ನುಗ್ಗಿದ್ದವು , ಆಹಾರ ಹರಸಿಯೋ , ದಾರಿ ತಪ್ಪಿಯೋ ಬಂದಿದ್ದ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳಲೇತ್ನಿಸುತ್ತಿದ್ದ ಯುವಕರ ಹುಚ್ಚು ಸಾಹಸ ಪೊಲೀಸರಿಗೆ ತಲೆ ಬಿಸಿ ಮಾಡಿತ್ತು.

ಇಂತಹ ಸೆಲ್ಫಿ ಹುಚ್ಚಿನಿಂದ ಪ್ರಾಣ ಕಳೆದು ಕೊಂಡ ಅನೇಕ ನಿದರ್ಶನಗಳು ಇದ್ದರೂ ಇನ್ನೂ ಹೆಚ್ಚಿತ್ತು ಕೊಳ್ಳದ ಹುಚ್ಚು ಯುವಕರು , ಸೆಲ್ಫಿ ಕಾಯಿಲೆಗೆ ಬಲಿಯಾಗಿದ್ದಾರ ಅನಿಸದಿರದು.

ಇನ್ನು, ಇಂದು ಸುಮಾರು 7 ಆನೆಗಳ ದಂಡು ಬನ್ನೇರುಘಟ್ಟ ಶ್ರೀ ಚಂಪಕಾಧಾಮ ಸ್ವಾಮಿ ದೇವಾಲಯ ಬಳಿ ದಿಡೀರ್ ಪ್ರತ್ಯಕ್ಷವಾದವು ,  ಜೈವಿಕ ಉದ್ಯಾನವನದಿಂದ ಬಂದಿದ್ದ  ಆನೆಗಳು ಸಾರ್ವಜನಿಕರ ಕೂಗಾಟ ಕಿರುಚಾಟಕ್ಕೆ ಎತ್ತ ಸಾಗುವುದೆಂದು ತಬ್ಬಿಬ್ಬಾದವು.  ಸ್ಥಳಕ್ಕೆ ಬಂದ ಆರಣ್ಯಅದಿಕಾರಿಗಳು ಸೆಲ್ಫಿ ಪ್ರಜೆಗಳನ್ನು ತಡೆಯಲು ಹಾಗೂ ಆನೆಗಳನ್ನು ಮತ್ತೆ  ಉದ್ಯಾನವನದತ್ತ  ಕರೆದೊಯ್ಯಲು  ಹರಸಾಹಸ ಪಡಬೇಕಾಯಿತು. /// Anekal News Kannada