ಅತ್ತಿಬೆಲೆ ಟೋಲ್ ಸಿಬ್ಬಂದಿಗೂ ಸ್ಥಳೀಯರಿಗೂ ಕೋಳಿ ಜಗಳ

ಅತ್ತಿಬೆಲೆ ಟೋಲ್ ಸಮಸ್ಯೆ

Kannada News(itskannada) ಅತ್ತಿಬೆಲೆ ಟೋಲ್ ಸಿಬ್ಬಂದಿಗೂ ಸ್ಥಳೀಯರಿಗೂ ಕೋಳಿ ಜಗಳ

ಆನೇಕಲ್ – ಅತ್ತಿಬೆಲೆ ಟೋಲ್ : ಬೆಂಗಳೂರು ಹೊರವಲಯ ಅತ್ತಿಬೆಲೆ ಟೋಲ್ ಮತ್ತು ಸ್ಥಳೀಯ ವಾಹನಗಳ ಮಾಲೀಕರಿಗೆ ನಡೆಯುತ್ತಿರುವ ಕೋಳಿ ಜಗಳಕ್ಕೆ ಸಾವಿರಾರು ವಾಹನ ಸವಾರರ ಪರದಾಟ. ಟೋಲ್ ಪಾವತಿಸಿ ಹೋಗುವಂತೆ ಲಾರಿಗಳಿಗೆ ಧಿಗ್ಬಂದನ ಹಾಕಿದ ಟೋಲ್ ಸಿಬ್ಬಂದಿ. ನಾವು ಸ್ಥಳೀಯರು ನಾವು ಟೋಲ್ ಪಾವತಿಸುವುದಿಲ್ಲ ಎಂದು ಲಾರಿ ಚಾಲಕರ ಪಟ್ಟು.

ಇವರಿಬ್ಬರ ಹಟದಿಂದಾಗಿ ಇಂದು ಸಾವಿರಾರು ವಾಹನಗಳು ಗಂಟೆಗಟ್ಟಲೆ ಕಾಯುವಂತಾ ಪರಿಸ್ಥಿತಿ ನಿರ್ಮಾಣ. ಇದರಿಂದಾಗಿ ವಾಹನ ಚಾಲಕರು ಎತ್ತ ಹೋಗಲಿಕ್ಕಾಗದೆ ರಸ್ತೆಯಲ್ಲಿ 3-4 ಗಂಟೆಗಳು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಾಯಿತು.

ಏನಿದು ಅತ್ತಿಬೆಲೆ ಟೋಲ್ ಸಮಸ್ಯೆ:

ಸುಮಾರು ಎಂಟು ವರ್ಷಗಳ ಹಿಂದೆ ಅತ್ತಿಬೆಲೆ ಪಟ್ಟಣದಲ್ಲಿ ಟೋಲ್ ಸಂಸ್ಥೆಯೊಂದು ನಿರ್ಮಾಣವಾಗಿತ್ತು. ಪ್ರಾರಂಭದಲ್ಲಿ ಸ್ಥಳೀಯರು ನಾವು ಟೋಲ್ ಪಾವತಿಸುವುದಿಲ್ಲ ಎಂಬ ಮಾತಿಗೆ ಕಿವಿಗೊಡದ ಟೋಲ್ ಸಂಸ್ಥೆ ಎಲ್ಲರ ಬಳಿ ಟೋಲ್ ಸಂಗ್ರಹಿಸಲು ಮುಂದಾಗಿತ್ತು. ಆದರೆ ಸ್ಥಳೀಯರು ಸೇರಿದಂತೆ ಹಲವಾರು ಸಂಘಟನೆಗಳು ಟೋಲ್ ವಿರುದ್ದ ಧನಿ ಎತ್ತಿ ಹಲವಾರು ಹೋರಾಟಗಳನ್ನು ಮಾಡಿತ್ತು ಈ ಹಿನ್ನೆಲೆ ಸ್ಥಳೀಯ ವಾಹನಗಳಿಗೆ ವಿಳಾಸ ನೀಡಿ ಉಚಿತವಾಗಿ ಹೋಗುವಂತೆ ಹೇಳಿತ್ತು ಅದರಂತೆ ಸ್ಥಳೀಯ ವಾಹನಗಳು ಸ್ಥಳೀಯ ಐಡಿ ನೀಡಿ ಉಚಿತವಾಗಿ ಹೋಗುತ್ತಿತ್ತು .

ಅತ್ತಿಬೆಲೆ ಟೋಲ್ ಸಮಸ್ಯೆ-ಈ ಮೊದಲೇ ಜಿಲ್ಲಾಧಿಕಾರಿಗೆ ದೂರು

ಒಂದೆರಡು ವರ್ಷಗಳು ಕಳೆದ ಮೇಲೆ ಟೋಲ್ ಸಂಸ್ಥೆ ಬಿಳಿ ಬೋರ್ಡ್ ವಾಹನಗಳು ಬಿಟ್ಟು ಹಳದಿ ಬೋರ್ಡು ಹೊಂದಿರುವ ವಾಣಿಜ್ಯಮಯ ಎಲ್ಲಾ ಸ್ಥಳೀಯ ವಾಹನಗಳು ಟೋಲ್ ಪಾವತಿಸಿ ಹೋಗಬೇಕೆಂದು ಪಟ್ಟು ಹಿಡಿದಿತ್ತು. ಈ ಕುರಿತು ಟಿಪ್ಪರ್ ಲಾರಿ ಅಸೋಶಿಯನ್ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ತಮ್ಮ ಸಮಸ್ಯೆಯ ಬಗ್ಗೆ ಟೋಲ್ ವಿರುದ್ದ ದೂರು ನೀಡಿತ್ತು. ಈ ಹಿನ್ನೆಲೆ ಅಂದಿನ ಜಿಲ್ಲಾಧಿಕಾರಿ ಪ್ರಕಾಶ್ ಅವರು ಸ್ಥಳಕ್ಕೆ ಬಂದು ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಟೋಲ್ ಸಂಗ್ರಹದ ಕ್ಯಾಬಿನ್ಗಳನ್ನು ಜೆಸಿಬಿ ಮೂಲಕ ತೆರವು ಗೊಳಿಸಿ ಸ್ಥಳೀಯ ಎಲ್ಲಾ ವಾಹನಗಳಿಗೆ ಅನುವು ಮಾಡಿಕೊಟ್ಟಿದ್ದರು.

ಟ್ರಾಫಿಕ್ ಸಮಸ್ಯೆಯ ಹಿನ್ನೆಲೆ ಅತ್ತಿಬೆಲೆ ಟೋಲ್ ಆಡಳಿತ ಕೊನೆಗೂ ಲಾರಿಗಳನ್ನು ಬಿಡಬೇಕಾಯಿತು.

ಆದರೆ ಮತ್ತೆ ಅತ್ತಿಬೆಲೆ ಟೋಲ್ ಸಂಸ್ಥೆಯು ಸರ್ವೀಸ್ ರಸ್ತೆಯಲ್ಲಿ ಟೋಲ್ ಸಂಗ್ರಹದ ಕ್ಯಾಬೀನ್ ಗಳನ್ನು ನಿರ್ಮಿಸಿ ಮತ್ತೆ ಸ್ಥಳೀಯ ವಾಣಿಜ್ಯಮಯ ವಾಹನಗಳಿಗೆ ಟೋಲ್ ನೀಡುವಂತೆ ಹೇಳಿತ್ತು ಇದರ ಬಗ್ಗೆ ಹಲವು ಬಾರಿ ಟೋಲ್ ಸಿಬ್ಬಂದಿ ಹಾಗೂ ಲಾರಿ ಮಾಲಿಕರ ನಡುವೆ ಗಲಾಟೆಗಳಾಗುತ್ತಿತ್ತು. ಅದರಂತೆ ಇಂದು ಸಹಾ ಅದೇ ರೀತಿ ಜಗಳವಾದ ಹಿನ್ನೆಲೆ ಕಿಲೋಮೀಟರ್ ಘಟ್ಟಲೆ ಟ್ರಾಫಿಕ್ ಸಮಸ್ಯೆ ಉಧ್ಬವವಾಗಿತ್ತು. ಇಷ್ಟೆಲ್ಲಾ ಸಮಸ್ಯೆಯಾಗಿದ್ದರು ಸ್ಥಳಕ್ಕೆ ಬಂದ ಸ್ಥಳೀಯ ಪೋಲೀಸರು ಮಾತ್ರ ಮೌನವಾಗಿದ್ದರು.
ಪಟ್ಟು ಬಿಡದ ಲಾರಿ ಮಾಲಿಕರು ಕೊನೆಗೂ ಹಣ ಪಾವತಿ ಮಾಡಿಲ್ಲ. ಟ್ರಾಫಿಕ್ ಸಮಸ್ಯೆಯ ಹಿನ್ನೆಲೆ ಟೋಲ್ ಆಡಳಿತ ಕೊನೆಗೂ ಲಾರಿಗಳನ್ನು ಬಿಡಬೇಕಾಯಿತು.
ಆದರೆ ನಿರಂತರವಾಗಿ ನಡೆಯುತ್ತಿರುವ ಈ ಅತ್ತಿಬೆಲೆ ಟೋಲ್ ಸಮಸ್ಯೆಗೆ ಪರಿಹಾರ ಯಾವಾಗ ಸಿಗುತ್ತದೆ? ಎಂಬ ಪ್ರಶ್ನೆಗೆ ಸಂಭಂದ ಪಟ್ಟ ಇಲಾಖಾ ಅಧಿಕಾರಿಗಳು ಹೇಳಬೇಕಾಗುತ್ತದೆ. ////  Anekal News Kannada

-ಮಲ್ಲಿಕಾರ್ಜುನ್ .ಬಿ (ಆನೇಕಲ್)

ಅತ್ತಿಬೆಲೆ ಟೋಲ್ ಸಮಸ್ಯೆ-ಅತ್ತಿಬೆಲೆ ಟೋಲ್ ಸಿಬ್ಬಂದಿಗೂ ಸ್ಥಳೀಯರಿಗೂ ಕೋಳಿ ಜಗಳ

Keyword : attibele toll gate News in Kannada, attibele toll gate ,Attibele Toll Plaza, Attibele hosur Toll Plaza,