ಆನೇಕಲ್ – ವಿಶ್ವ ಬಾಲ ಕಾರ್ಮಿಕ ಪದ್ಧತಿ-ಜನಜಾಗೃತಿ ಜಾಥಾ

Anekal News Kannada-World Child Labor System-Awareness Jatha

0 61

Kannada News(itskannada) Anekal – ಆನೇಕಲ್ : ವಿಶ್ವ ಬಾಲ ಕಾರ್ಮಿಕ ಪದ್ಧತಿ-ಜನಜಾಗೃತಿ ಜಾಥಾ.

ಆನೇಕಲ್ – ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ಜಾಥಾ

ಆನೇಕಲ್- ಎಲ್ಲಾ ಮಕ್ಕಳಿಗೂ ಬಾಲ್ಯದಲ್ಲಿ ವಿದ್ಯಾಬ್ಯಾಸ ಕಡ್ಡಾಯವಾಗಿ ಸಿಗಲೇಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ಥಳೀಯ ಸಂಸ್ಥೆ ಅಧ್ಯಕ್ಷ ಕೆ.ಗೋಪಾಲಕೃಷ್ಣ ನುಡಿದರು.

ಮಕ್ಕಳನ್ನು ದುಡಿಮೆಗೆ ಅಟ್ಟುವುದು ಕಾನೂನು ರೀತ್ಯ ಅಪರಾಧ – ಕೆ.ಗೋಪಾಲಕೃಷ್ಣ

ವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಅತ್ತಿಬೆಲೆ ಸ್ಥಳೀಯ ಸಂಸ್ಥೆಯು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಶ್ರೀಮಂತರ ಮನೆಯಲ್ಲಿ ಜನಿಸಲಿ ಅಥವಾ ಕಡು ಬಡವರ ಮನೆಯಲ್ಲಾದರೂ ಜನಿಸಲಿ ಮಕ್ಕಳೆಲ್ಲರೂ ಒಂದೇ. ವಿಧ್ಯೆ ಕಲಿಯುವುದು ಎಲ್ಲಾ ಮಕ್ಕಳ ಹಕ್ಕು. ಅವರ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು. ಕೂಲಿ ಕಾರ್ಮಿಕರ ಮಕ್ಕಳೇ ಆಗಲಿ, ಕಡು ಬಡವನ ಮಗುವೇ ಆಗಲಿ ಇತರೆ ಎಲ್ಲಾ ಮಕ್ಕಳಂತೆ ಅವರೂ ಸಹ ಶಾಲೆಗೆ ಹೋಗಬೇಕು, ವಿಧ್ಯೆ ಕಲಿಯುವ ಜೊತೆಗೆ ಆಡಿ ಕುಣಿಯುವ ವಯಸ್ಸು ಅವರದ್ದು. ಅಂತಹ ಮಕ್ಕಳನ್ನು ದುಡಿಮೆಗೆ ಅಟ್ಟುವುದು ಕಾನೂನು ರೀತ್ಯ ಅಪರಾಧವಾಗಿದೆ ಅಷ್ಟೇಅಲ್ಲದೆ ಇದೊಂದು ಅಮಾನವೀಯ ಕೃತ್ಯ ಎಂದು ಹೇಳಿದರು.

ಸ್ಕೌಟ್ಸ್‍ನ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಎನ್.ಎಸ್. ಪ್ರಭು ಮಾತನಾಡಿ ಮುಗ್ದ ಮನಸ್ಸಿನ ಕಂದಮ್ಮಗಳನ್ನು ದುಡಿಯಲು ಬಿಡುವುದು ಹೇಯ ಕೃತ್ಯ. ಯಾರೇ ಪೋಷಕರಾಗಲಿ ತಮ್ಮಿಂದ ಆ ಮಕ್ಕಳನ್ನು ಓದಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಈಗಿಲ್ಲ. ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಗಳು ಉತ್ತಮ ಸರ್ಕಾರಿ ಶಾಲೆಗಳು, ವಸತಿ ಗೃಹಗಳನ್ನು ನಿರ್ಮಿಸಿವೆ. ಬಿಸಿ ಊಟ, ಸಮವಸ್ತ್ರ, ಪುಸ್ತಕ ಇತ್ಯಾದಿ ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ. ಅಷ್ಟೇ ಅಲ್ಲದೆ ಸಂಚಾರಿ ಶಾಲೆಗಳನ್ನೂ ಸಹ ನಡೆಸುತ್ತಿವೆ. ಇಂತಹ ಸೌಲಭ್ಯಗಳನ್ನು ಕೂಲಿ ಕಾರ್ಮಿಕರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.Anekal News Kannada-World Child Labor System-Awareness Jatha-itskannada

ಸಾಮಾಜಿಕ ಪಿಡುಗುಗಳ ಪೈಕಿ ಬಾಲ ಕಾರ್ಮಿಕ ಪದ್ಧತಿಯೂ ಸಹ ಒಂದು – ಎ.ಎನ್. ನರೇಂದ್ರ ಕುಮಾರ್

ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಕಾರ್ಯದರ್ಶಿ ಎ.ಎನ್. ನರೇಂದ್ರ ಕುಮಾರ್ ಮಾತನಾಡಿ ಸಾಮಾಜಿಕ ಪಿಡುಗುಗಳ ಪೈಕಿ ಬಾಲ ಕಾರ್ಮಿಕ ಪದ್ಧತಿಯೂ ಸಹ ಒಂದು. ಇಟ್ಟಿಗೆ ಕಾರ್ಖಾನೆ, ಹೋಟೆಲ್, ವರ್ಕ್‍ಶಾಪ್, ಪೇಪರ್ ಆಯುವ ಕುಟುಂಬಗಳೂ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಈಗಲೂ ಸಹ ಬಾಲ ಕಾರ್ಮಿಕರು ನೋಡ ಸಿಗುತ್ತಾರೆ. ಸರ್ಕಾರಗಳು ಇದರ ವಿರುದ್ದ ಅನೇಕ ಯೋಜನೆಗಳು ಮತ್ತು ಕನೂನುಗಳನ್ನು ತಂದಿದೆ, ಹಾಗೆಂದು ಎಲ್ಲಾ ಜವಾಬ್ದಾರಿಯೂ ಸರ್ಕಾರವೇ ನಿಭಾಯಿಸಬೇಕೆಂದು

World-Child-Labor-System-Awareness-Jatha-itskannadaಕೂರುವುದು ಸರಿಯಲ್ಲ. ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪ್ರಜ್ಞಾವಂತ ನಾಗರೀಕರೂ ಸಹ ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಬೇಕು ಹಾಗೂ ಇಂತಹ ಪಿಡುಗು ನಿವಾರಣೆಯ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರಗಳ ಜೊತೆ ಕೈಜೋಡಿಸಬೇಕು ಎಂದು ನುಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಶಿವಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಖಜಾಂಚಿ ಸಿ. ಲಕ್ಷ್ಮೀಕಾಂತರಾಜು, ಜಿಲ್ಲಾ ಗೈಡ್ ಆಯುಕ್ತೆ ವಿಜಯಲಕ್ಷ್ಮಿ, ಜಿಲ್ಲಾ ತರಬೇತಿ ಆಯುಕ್ತರುಗಳಾದ ಎ.ಎಂ. ಮಂಜುನಾಥ್, ಕೆ.ವಿ. ವಸಂತಮ್ಮ, ಅತ್ತಿಬೆಲೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಅರುಣಾ ನಟರಾಜ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ಯಲ್ಲಪ್ಪ, ಸಹಾಯಕ ಜಿಲ್ಲಾ ಆಯುಕ್ತ ವಿ. ಶ್ರೀನಿವಾಸ್, ಕಾರ್ಯದರ್ಶಿ ಎನ್. ಪ್ರಭಾಕರ್, ಖಜಾಂಚಿ ಅಶೋಕ್ ವಿ. ಸಣ್ಣಮನಿ, ಜಂಟೀ ಕಾರ್ಯದರ್ಶಿ ಎ.ಎನ್. ಪ್ರಭಾವತಿ, ಸಿ.ಆರ್.ಪಿ. ದತ್ತಾತ್ರೇಯ ಮೊದಲಾದವರು ಉಪಸ್ಥಿತರಿದ್ದರು. //// Anekal News Kannada

Web : Anekal News Kannada-World Child Labor System-Awareness Jatha

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!