ಆನೇಕಲ್ : ಸ. ಹಿ. ಪ್ರಾ.ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

Kannada News (itskannada) Anekal : ಆನೇಕಲ್ : ಸ. ಹಿ. ಪ್ರಾ.ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ : ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ ಗಿಡ ನೆಟ್ಟರು.

ಮಾನವ ತಮ್ಮ ಸ್ವಾರ್ಥಕೋಸ್ಕರ ಕಾಡನ್ನು ನಾಶಮಾಡುತಿದ್ದು ಇದರಿಂದ ವಾತಾವರಣದಲ್ಲಿ ಏರುಪೇರಾಗಿದ್ದು ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಸಸಿಯನ್ನು ನಾಟುವ ಮೂಲಕ ಪರಿಸರ ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ ಹೇಳಿದರು.
ಅವರು ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕಕ್ಕೆ ಚಾಲನೆ ನೀಡಿ ಮಾತನಾಡಿದರು, ಭೂಮಿಯ ಗರ್ಭದಲ್ಲಿ ಅನೇಕ ಬೆಂಕಿ ಜ್ವಾಲೆಗಳಿವೆ ಆದರೆ ಸಕಲ ಜೀವ ರಾಶಿಗಳು ಬದುಕಲು ಬೇಕಾದ ಪರಿಸರವನ್ನು ಒದಗಿಸುವುದು ಭೂಮಿ, ಆದರೆ ಪರಿಸರದಿಂದ ಎಲ್ಲವನ್ನು ಪಡೆದ ಮನುಷ್ಯ ಏಕೆ ಪರಿಸರ ಸರಂಕ್ಷಣೆ ಮಾಡಲು ಮುಂದಾಗುತಿಲ್ಲ ಏಕೆ ಎಂಬುದು ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಪರಿಮಳ, ಎಸ್‍ಡಿಎಂಸಿ ಅಧ್ಯಕ್ಷೆ ಮಂಜುಳ, ಶಿಕ್ಷಕರಾದ ಹರೀಶ್, ಯಶೋಧ, ಕಾಂತ, ಕವಿತ, ರೂಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ///   ಆನೇಕಲ್ ನ್ಯೂಸ್