ಆನೇಕಲ್ : ದಿವಂಗತ ಅಶ್ವಥ್‍ ನಾರಾಯಣ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ

Anekal-Blood Donation Camp for The late Ashwath Narayan Memorial

0

ಆನೇಕಲ್ : ದಿವಂಗತ ಅಶ್ವಥ್‍ ನಾರಾಯಣ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ

ಪುರಸಭಾ ಮಾಜಿ ಅಧ್ಯಕ್ಷ ದಿವಂಗತ ಅಶ್ವಥ್‍ನಾರಾಯಣ್ ಅವರ ಸ್ಮರಣಾರ್ಥ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು

ಆನೇಕಲ್ : ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ವ್ಯಕ್ತಿಯ ಜೀವವನ್ನು ಉಳಿಸುವ ಶಕ್ತಿ ರಕ್ತದಾನಕ್ಕಿದೆ. ಯುವಕರಾಗಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು. ಈ ಮೂಲಕ ಒಂದು ಜೀವ ಉಳಿಸುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಆನೇಕಲ್‍ನ ವೈದ್ಯ ಡಾ.ಸಿ.ಬಿ.ಮೋಹನ್ ತಿಳಿಸಿದರು.

ಅವರು ಪಟ್ಟಣದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ದಿವಂಗತ ಅಶ್ವಥ್‍ನಾರಾಯಣ್ ಅವರ ಸ್ಮರಣಾರ್ಥ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಅವಶ್ಯಕತೆಯಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬೇಕು. ಇದರಿಂದ ಸಾರ್ಥಕತೆ ಬರುತ್ತದೆ. ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿವೆ. ಕಿಡ್ನಿ ವೈಪಲ್ಯದಿಂದ ಬಳಲುವ ಹಲವಾರು ಮಂದಿ ಇದ್ದಾರೆ. ಈ ಯಂತ್ರಗಳು ಸಾಕಾಗುವುದಿಲ್ಲ. ಹಾಗಾಗಿ ಅಶ್ವಥ್‍ನಾರಾಯಣ ಅಭಿಮಾನಿಗಳ ಬಳಗದ ವತಿಯಿಂದ ಒಂದು ಡಯಾಲಿಸಿಸ್ ಯಂತ್ರವನ್ನು ಕೊಡುಗೆ ನೀಡುವಂತೆ ಸಲಹೆ ಮಾಡಿದರು.

ಆನೇಕಲ್ ಪುರಸಭೆಯ ಅಧ್ಯಕ್ಷರಾಗಿ ಜನಸ್ನೇಹಿ ಆಡಳಿತ ಮಾಡಿದ ಹೆಗ್ಗಳಿಕೆ ಅಶ್ವಥ್‍ನಾರಾಯಣ್ ಅವರಿಗೆ ಸಲ್ಲುತ್ತದೆ. ಪಟ್ಟಣದಲ್ಲಿ ಪಾದಚಾರಿ ಮಾರ್ಗ, ಪ್ಲಾಸ್ಟಿಕ್ ನಿಷೇಧ, ಡಾ.ರಾಜ್‍ಕುಮಾರ್ ಉದ್ಯಾನವನ ಸೇರಿದಂತೆ ಪಟ್ಟಣದ ಅಭಿವೃದ್ಧಿಯಲ್ಲಿ ಹೆಜ್ಜೆಗುರುತು ಮೂಡಿಸಿದ್ದ ಅವರ ಹೆಸರಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಅಭಿಮಾನಿ ಬಳಗವು ಕಾರ್ಯಕ್ರಮ ರೂಪಿಸಬೇಕು ಎಂದರು.

ರಕ್ತದಾನ ಶಿಬಿರದಲ್ಲಿ 280 ಮಂದಿ ರಕ್ತದಾನ ಮಾಡಿದರು ಎಂದು ಪುರಸಭಾ ಸದಸ್ಯ ಪದ್ಮನಾಭ್ ತಿಳಿಸಿದರು.
ಆನೇಕಲ್ ಪಿಎಸ್‍ಐ ಹೇಮಂತ್‍ಕುಮಾರ್, ವೈದ್ಯ ಡಾ.ವಿಜ್ಞಾನ್, ಜಿಎಂಆರ್ ಎಲೈಟ್ ಅಕಾಡೆಮಿಯ ಡಾ.ಜಿ.ಮುನಿರಾಜು ಹಾಜರಿದ್ದರು. ///// ವರದಿ : ಮಲ್ಲಿಕಾರ್ಜುನ್ ಆರಾಧ್ಯ (ಆನೇಕಲ್)

WebTitle : ಆನೇಕಲ್ : ದಿವಂಗತ ಅಶ್ವಥ್‍ ನಾರಾಯಣ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ – Anekal-Blood Donation Camp for The late Ashwath Narayan Memorial

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Anekal News KannadaAnekal News Today

You're currently offline