ತುಮಕೂರು ಬಳಿ ಪೊಲೀಸರಿಂದ 2.98 ಕೋಟಿ ರೂ. ವಶ

Police seizes Rs 2.98 cr cash near Tumkur

0 25

Tumkur (itskannada)ತುಮಕೂರು:  ತುಮಕೂರು ಬಳಿ ಪೊಲೀಸರಿಂದ 2.98 ಕೋಟಿ ರೂ. ವಶ : ಚುನಾವಣಾ ಆಯೋಗದ  ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಖಾಸಗಿ ಬಸ್ ಯಿಂದ 2.98 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ನಗರ ಹೊರವಲಯದಲ್ಲಿರುವ JAS ಟೋಲ್ ನ ಬಳಿ ಮಂಗಳವಾರ ಬೆಳಿಗ್ಗೆ ಗಜಾನನಾ ಮೋಟಾರ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಸ್ಲೀಪರ್ ಕೋಚ್ ಬಸ್ ನಿಂದ 2000 ಮತ್ತು 500 ರೂ. ಮುಖಬೆಲೆಯ 2.98 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕರಂತೆ ನಟಿಸಿದ ಪೊಲೀಸರು ಖಾಸಗಿ ಬಸ್ ಮೇಲೆ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡರು ಎಂದು ಜಿಲ್ಲೆಯ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ದಿವ್ಯ ಗೋಪಿನಾಥ್ ಹೇಳಿದರು, ‘ಹಣವು ಯಾರಾದರೂ ಪ್ರಯಾಣಿಕರಿಕೆ ಸೇರಿದ್ದಿರಬೇಕೆಂದು ವಿಚಾರಿಸಿದಾಗ ಅದರ ವಾರಸುದಾರರು ಯಾರು ಅಲ್ಲಿರಲಿಲ್ಲ, ಹಣವು ಯಾರದು ಎಂದು ಹೇಳಲು ಯಾರೊಬ್ಬರೂ ಮುಂದೆ ಬರಲಿಲ್ಲ.

ಹಣದ ಮೂಲವನ್ನು ಕಂಡುಹಿಡಿಯಲು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಕ್ಯಾತ್ಸಂದ್ರ  ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ –  Tumkur News Online – Crime – Karnataka Crime NewsKannada NewsKarnataka News

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

18 − 2 =