Kannada news-Latest news in Kannada-Kannada live news-Kannada Breaking News-Online Kananda News

ತಲೆ ನೋವು ಅಂತ ಬಂದ್ರೆ ಈ ಡಾಕ್ಟರ್ ಮಾಡಿದ್ದೇನು ಗೊತ್ತಾ

Doctor arrested for Kissing and Hugging Patient - Ramanagara - itskannada

0 33

ರಾಮನಗರ (itskannada) ತಲೆ ನೋವು ಅಂತ ಬಂದ್ರೆ ಈ ಡಾಕ್ಟರ್ ಮಾಡಿದ್ದೇನು ಗೊತ್ತಾ:  ಈ ಕಾಲದಲ್ಲಿ ಯಾರನ್ನ ನಂಬುವುದು , ಯಾರನ್ನ ಬಿಡುವುದೋ ಗೊತ್ತಿಲ್ಲ. ಮಹಿಳೆಯೆಂದರೆ ಸಾಕು ಕಾಮದ ಕಣ್ಣುಗಳು ತೆರೆದುಕೊಳ್ಳುತ್ತವೆ. ಯಾಕೆ ಅವಳಲ್ಲೊಬ್ಬಳು ತಾಯಿ , ತಂಗಿ , ಅಕ್ಕ ಕಾಣುವುದಿಲ್ಲ. ಇಲ್ಲೊಬ್ಬ ಫೋಲಿ ಡಾಕ್ಟರ್ ಉಷಾರಿಲ್ಲ ಅಂತ ಬಂದ ಮಹಿಳಾ ರೋಗಿಗೆ ಮಾಡಿದ್ದೇನು ಗೊತ್ತ. 27 ವರ್ಷದ ಮಹಿಳೆಯೊಬ್ಬರು ತೀವ್ರ ತಲೆನೋವು ಎಂದು  64 ವರ್ಷದ ಈ ಪೋಲಿ ಡಾಕ್ಟರ್ ಬಳಿ ಬಂದರೆ , ಆತ ಚಿಕಿತ್ಸೆ ಮಾಡುವುದು ಬಿಟ್ಟು ಕೀಟಲೆ ಶುರುಮಾಡಿದ್ದಾನೆ.

ಚುಂಬಿಸುವುದಕ್ಕೂ ಮತ್ತು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಖಾಸಗಿ ವೈದ್ಯನ ಪೋಲಿ ಆಟ ಅಷ್ಟಕ್ಕೇ ತಿಳಿದ ಆ ಮಹಿಳೆ ಈ ಬಗ್ಗೆ  ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

ಗೃಹಿಣಿಯನ್ನು ತಬ್ಬಿಕೊಳ್ಳುವುದು ಮತ್ತು ಚುಂಬನ ಮಾಡಿದ್ದಕ್ಕಾಗಿ ಈ ಖಾಸಗಿ ವೈದ್ಯನನ್ನು ಬಂಧಿಸಲಾಯಿತು.

ಬ್ಯಾಡರಹಳ್ಳಿಯ ಡಾ. ಶಿವರಾಜ್ ಎಂಬುವವನೇ ಈ ಪೋಲಿ ಡಾಕ್ಟರ್ ಸದ್ಯ ಪೊಲೀಸರು ಈ ಬಗ್ಗೆ ಐಪಿಸಿ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ . 30 ವರ್ಷಗಳಿಂದ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ನಂತರ ಈ ಶಿವರಾಜ್ ಆಂಜನಾನಗರದಲ್ಲಿ ಖಾಸಗಿ ಆಸ್ಪತ್ರೆ ತೆರೆದಿದ್ದನು.

ಬಂಧನದ ಸುದ್ದಿ ಹರುಡುತ್ತಿದ್ದಂತೆ, ಬ್ಯಾಡರಹಳ್ಳಿ , ತಾವರೆಕೆರೆ , ಸುತ್ತಮುತ್ತಲಿನ ಗ್ರಾಮಗಳ ಸುಮಾರು 200 ನಿವಾಸಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು, ಆತನೊಬ್ಬ ಹೆಸರುವಾಸಿ ಡಾಕ್ಟರ್ ಅವರ ಗುಣಕ್ಕೆ ಮಸಿ ಬಳೆಯಲು ಯಾರೋ ಯತ್ನಿಸುತ್ತಿದ್ದಾರೆ ಎಂದು ಡಾಕ್ಟರ್ ಅನ್ನು ಬಿಡುಗಡೆಗೊಳಿಸಲು ದುಂಬಾಲು ಬಿದ್ದರು.

ಪೊಲೀಸರು ವೈದ್ಯನನ್ನು ರಾಮನಗರದ ಸ್ಥಳೀಯ ನ್ಯಾಯಾಲಯಕ್ಕೆ  ಹಾಜರುಪಡಿಸಿದರು. ವಿಚಾರಣೆ ಬಳಿಕ  ಆ ವೈದ್ಯ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಾನೆ.

ಬ್ಯಾಡರಹಳ್ಳಿಯ ನಿವಾಸಿ ಆ ಗೃಹಿಣಿ 2 ವರ್ಷದ ಮಗುವಿನ ತಾಯಿ , ತೀವ್ರ ತಲೆನೋವಿನ ಚಿಕಿತ್ಸೆಗೆಂದು ಆ ಕ್ಲಿನಿಕ್ ಗೆ ಹೋಗಿದ್ದರು. | itskannada


WebTitle: Doctor arrested for Kissing and Hugging Patient

Keyword: ತಲೆ ನೋವು ಅಂತ ಬಂದ್ರೆ ಈ ಡಾಕ್ಟರ್ ಮಾಡಿದ್ದೇನು ಗೊತ್ತಾ -Doctor arrested for Kissing and Hugging Patient

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ರಾಮನಗರ ಸುದ್ದಿ ಗಾಗಿ- ರಾಮನಗರ ಸುದ್ದಿ – ಪುಟ ಕ್ಲಿಕ್ಕಿಸಿ ಅಥವಾ ವಿಭಾಗ ರಾಮನಗರ ನ್ಯೂಸ್ ಕ್ಲಿಕ್ಕಿಸಿ itskannada :Today News in Kannada, for latest news visit-Kannada news– more in Ramanagara Click-Ramanagara News Online – or look at Ramanagara News Today