Kannada news-Latest news in Kannada-Kannada live news-Kannada Breaking News-Online Kananda News

ಮಂಗಳೂರು,ಕೊಪ್ಪಳ,ವಿಜಯಪುರ-ಬಂದ್ ಗೆ ನೀರಸ ಪ್ರತಿಕ್ರಿಯೆ

Mangalore-Koppal-Vijayapura-away from the bundh | itskannada

0 6

( itskannada ) ಮಂಗಳೂರು, ಕೊಪ್ಪಳ,ವಿಜಯಪುರ : ಬಂದ್ ಗೆ ನೀರಸ ಪ್ರತಿಕ್ರಿಯೆ : ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದರು, ಹಲವು ಕಡೆ ವ್ಯಾಪಕ ಬೆಂಬಲ ವ್ಯಕ್ತವಾಯಿತಾದರು ಕೊಪ್ಪಳ, ವಿಜಯಪುರ ಮತ್ತು ಮಂಗಳೂರು ನಂತಹ ಸ್ಥಳಗಳು ಯತಾವತ್ತಾಗಿ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಎಂದಿನಂತೆ ತೊಡಗಿದ್ದದ್ದು ಕಂಡು ಬಂತು.

ಮಂಗಳೂರು, ಕೊಪ್ಪಳ,ವಿಜಯಪುರ : ಬಂದ್ ಗೆ ನೀರಸ ಪ್ರತಿಕ್ರಿಯೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಎಂದಿನಂತೆ ಅಂಗಡಿಗಳು, ಶಾಲೆಗಳು ಮತ್ತು ಕಾಲೇಜುಗಳು ಪ್ರಾರಂಭವಾದವು. ಬಸ್ಸುಗಳು- ಖಾಸಗಿ ಮತ್ತು ಸಾರ್ವಜನಿಕ ಸಾಗಣೆ ವಾಹನಗಳು ಲಭ್ಯವಿದ್ದವು ಮತ್ತು ಯಾವುದೇ ಪ್ರಯಾಣಿಕರನ್ನು ತೊಂದರೆಗೆ ಒಳಪಡಿಸಲಿಲ್ಲ. ಮಾರಾಟಗಾರರು ಮತ್ತು ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ತೊಡಗಿದ್ದದ್ದು ಕಂಡು ಬಂತು ಮತ್ತು ಕೆಲವು ಸ್ಥಳಗಳಲ್ಲಿ, ವ್ಯಾಪಾರಿಗಳು ಬಂದ್ ಕರೆಗೆ ಬೆಂಬಲಿಸಲಿಲ್ಲ.

ಕೊಪ್ಪಳದಲ್ಲಿ ಇದೇ ರೀತಿಯ ಪರಿಸ್ಥಿತಿ ಉಳಿದುಕೊಂಡಿತ್ತು, ಅಲ್ಲಿ ಬಂದ್ ನ ಯಾವುದೇ ಚಿಹ್ನೆಗಳು ಗೋಚರಿಸಲಿಲ್ಲ. ಜಿಲ್ಲೆಯ ಆಡಳಿತವು ರಜಾದಿನವನ್ನು ಘೋಷಿಸಲಿಲ್ಲ , ಆದ್ದರಿಂದ ಶಾಲೆಗಳು ಮತ್ತು ಕಾಲೇಜುಗಳು ಎಂದಿನಂತೆ ಪ್ರಾರಂಭವಾದವು.

ಅಂತೆಯೇ ವಿಜಯಪುರ ಕೂಡ ಬಂದ್ ಕರೆಗೆ ದೂರ ಉಳಿದಿತ್ತು. ವ್ಯಾಪಾರಿಗಳು ಮತ್ತು ಮಾರಾಟಗಾರರು ಎಂದಿನಂತೆ ವ್ಯವಹರಿಸುತ್ತಿದ್ದರು.

ಅದನ್ನು ಹೊರತು ಪಡಿಸಿ , ಬೆಂಗಳೂರಿನಲ್ಲಿ ಮತ್ತು ರಾಜ್ಯದ ಇತರ ಜಿಲ್ಲೆಗಳು ಬಂದ್ ಗೆ  ಒಟ್ಟುಗೂಡಿದ್ದವು. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳು ರಸ್ತೆಯಿಂದ ದೂರ ಉಳಿದಿದ್ದವು. ಎಲ್ಲಾ ವಾಣಿಜ್ಯ ಸಂಸ್ಥೆಗಳು, ಚಿತ್ರಮಂದಿರಗಳು, ಹೋಟೆಲುಗಳು, ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳು ಮುಚ್ಚಿದ್ದವು. | itskannada


webTitle : Mangalore-Koppal-Vijayapura-away from the bundh

Keyword : ಮಂಗಳೂರು,ಕೊಪ್ಪಳ,ವಿಜಯಪುರ-ಬಂದ್ ಗೆ ನೀರಸ ಪ್ರತಿಕ್ರಿಯೆ , Mangalore-Koppal-Vijayapura-away from the bundh

ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡ ಕಲರ್ ಪುಲ್ ಸುದ್ದಿ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ  itskannada :Today News In Kannada –Kannada news-For more Mangalore News click Mangalore News Today– or Checkout Mangalore News Online

For more Koppal News Click Koppal News Today– or Checkout Koppal News Online

For more Vijayapura News Click Vijayapura News Today – or Checkout Vijayapura News Online